ಸಕಲೇಶಪುರ(ಹಾಸನ): ಸ್ನೇಹಿತನನ್ನು ಭೇಟಿಯಾಗಲು ಬಂದಿದ್ದ ವ್ಯಕ್ತಿ ಆಟೋದಲ್ಲೇ ಪ್ರಾಣ ಬಿಟ್ಟ ಘಟನೆ ತಾಲೂಕಿನ ಬಾಗೆ ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ಮೂಲದ ನಾಗರಾಜ್ (39) ಮೃತರು.
ಬೆಂಗಳೂರಿನಿಂದ ಸಕಲೇಶಪುರದ ಗೊಲಗೊಂಡೆ ಗ್ರಾಮದ ಸ್ನೇಹಿತ ಮಂಜುನಾಥನನ್ನು ನೋಡಲು ನಾಗರಾಜ್ ಬಂದಿದ್ದ. ಹಾಸನದಿಂದ ಬಸ್ ಮೂಲಕ ಬಂದು ನಂತರ ಬಾಗೆ ಗ್ರಾಮಕ್ಕೆ ಆಟೋದಲ್ಲಿ ಹೋಗುವಾಗ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರ ಜೇಬಿನಲ್ಲಿದ್ದ ಚಾಲನಾ ಪರವಾನಗಿ ಪತ್ರದಿಂದ ಅವರ ಗುರುತು ಸಿಕ್ಕಿದೆ.