ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ಜಗಳ.. ತಮ್ಮನಿಂದ ಅಣ್ಣನ ಹತ್ಯೆ - ತಮ್ಮನಿಂದ ಅಣ್ಣನ ಹತ್ಯೆ

ನಿನ್ನೆ ರಾತ್ರಿ ದಾಯಾದಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ನಂತರ ಎರಡು ಕುಟುಂಬದ ನಡುವೆ ಮಾರಾಮಾರಿ ನಡೆದು ಕೊನೆಗೆ ಚಿಕ್ಕಪ್ಪನ ಮಗನಿಂದಲೇ ಅಣ್ಣನ ಹತ್ಯೆ ನಡೆದಿದೆ.

ತಮ್ಮನಿಂದ ಅಣ್ಣನ ಹತ್ಯೆ
ತಮ್ಮನಿಂದ ಅಣ್ಣನ ಹತ್ಯೆ

By

Published : Feb 28, 2021, 9:24 PM IST

ಹಾಸನ : ಕ್ಷುಲ್ಲಕ ಕಾರಣಕ್ಕೆ ಚಿಕ್ಕಪ್ಪನ ಮಗನಿಂದಲೇ ಅಣ್ಣನ ಬರ್ಬರ ಹತ್ಯೆಯಾಗಿರುವ ಘಟನೆ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

ರವಿ (38) ಕೊಲೆಯಾದ ವ್ಯಕ್ತಿ. ನಿನ್ನೆ ರಾತ್ರಿ ದಾಯಾದಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ನಂತರ ಎರಡು ಕುಟುಂಬದ ನಡುವೆ ಮಾರಾಮಾರಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ರವಿ ಕೂಲಿ ಕೆಲಸಕ್ಕಾಗಿ ಸಕಲೇಶಪುರ ತಾಲೂಕಿನ ದೇವಾಲದಕೆರೆಗೆ ಬಂದಿದ್ದ ವೇಳೆ ಘಟನೆ ನಡೆದಿದೆ.

ಇನ್ನು ಘಟನೆ ಬಳಿಕ ಆರೋಪಿ ಕುಮಾರ್ ಪರಾರಿಯಾಗಿದ್ದು, ಆರೋಪಿಗಾಗಿ ಶೋಧ ನಡೆದಿದೆ. ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details