ಹಾಸನ:ರಾಜ ಕಾಲುವೆ ಮೇಲೆ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ನಗರದ ಎಂ.ಜಿ. ರಸ್ತೆಯಲ್ಲಿ ಶಾಮಿಯಾನ ಹಾಕಿಕೊಂಡು ಗ್ರಾ.ಪಂ.ಮಾಜಿ ಸದಸ್ಯನೋರ್ವ ಏಕಾಂಗಿಯಾಗಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಮಾಡ್ತಿದ್ದಾರೆ.
ಅನಧಿಕೃತ ಕಟ್ಟಡ, ಕ್ರಮಕ್ಕೆ ಆಗ್ರಹಿಸಿ ಅಹೋರಾತ್ರಿ ಏಕಾಂಗಿ ಉಪವಾಸ ಮುಷ್ಕರ
ಕೂಡಲೇ ರಾಜಕಾಲುವೆ ಮೇಲೆ ನಿರ್ಮಿಸಲಾಗಿರುವ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.
ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಜಿ. ರಸ್ತೆಯಲ್ಲಿರುವ ಶ್ರೀಕಂಠಯ್ಯ ವಾಣಿಜ್ಯ ಸಂಕಿರ್ಣದಲ್ಲಿನ ಜಾಗವನ್ನು ನಗರಾಭಿವೃದ್ದಿ ಪ್ರಾಧಿಕಾರ 11 ಮಳಿಗೆಗಳನ್ನು ಮತ್ತು ಎಲೆಕ್ಟ್ರಿಕಲ್ ಮೀಟರ್ ಬೋರ್ಡ್ಗಳನ್ನ ಸ್ಥಾಪಿಸಲಾಗಿತ್ತು. ಆದರೇ ಈಗ ಇದೆ ಜಾಗದಲ್ಲಿ ಮೀಟರ್ ಬೋರ್ಡ್ ತೆಗೆದುಹಾಕಿರೋ ಕೆಲವು ಬಂಡವಾಳ ಶಾಹಿಗಳು ಅನಧಿಕೃತವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ. 11 ಮಳಿಗೆಯ ಹಿಂಭಾಗದಲ್ಲಿ ರಾಜಕಾಲುವೆ ಇದ್ದು, ಇದರ ಮೇಲೆ ಅನಧಿಕೃತವಾಗಿ ಪ್ರಾಧಿಕಾರದ ನಿಯಮಗಳನ್ನು ಮೀರಿ ಮಳಿಗೆಗಳನ್ನು ನಿರ್ಮಿಸಿದ್ದು, ಹಿಂಭಾಗದಲ್ಲಿಯೂ ಅತಿಕ್ರಮಣವಾಗಿ ಕಟ್ಟಡ ನಿರ್ಮಿಸಿ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿರುವುದಾಗಿ ಆರೋಪಿಸಿದರು.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೂಡಲೇ ರಾಜಕಾಲುವೆ ಮೇಲೆ ನಿರ್ಮಿಸಲಾಗಿರುವ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದರು. ಬಂಡವಾಳ ಶಾಹಿಗಳಿಗೆ ಸಹಕರಿಸುತ್ತಿರುವ ಸತ್ಯಮಂಗಲ ಗ್ರಾಪಂ ಪಿಡಿಓ ನಟರಾಜು ವಿರುದ್ಧ ಬರವಣಿಗೆ ಮೂಲಕ ಬರೆದಿರುವ ಕರಪತ್ರಗಳನ್ನ ಸಾರ್ವಜನಿಕರಿಗೆ ಹಂಚಿಕೆ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಏಕಾಂಗಿ ಹೋರಾಟ ಮಾಡ್ತಿದ್ದಾರೆ.