ಹಾಸನ:ತೆಂಗಿನ ಮರದಿಂದ ಎಳನೀರು ಕೀಳುವ ವೇಳೆ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಆಲೂರು ತಾಲೂಕಿನ ಕಾಮತಿ ಗ್ರಾಮದಲ್ಲಿ ನಡೆದಿದೆ.
ಎಳನೀರು ಕೀಳುತ್ತಿದ್ದಾಗ ವಿದ್ಯುತ್ ಸ್ಪರ್ಶ, ವ್ಯಕ್ತಿ ಸಾವು - ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು
ಎಳನೀರು ಕೀಳುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.
![ಎಳನೀರು ಕೀಳುತ್ತಿದ್ದಾಗ ವಿದ್ಯುತ್ ಸ್ಪರ್ಶ, ವ್ಯಕ್ತಿ ಸಾವು hassan](https://etvbharatimages.akamaized.net/etvbharat/prod-images/768-512-11538919-thumbnail-3x2-net.jpg)
ಧರಣಿ ಮೃತ ವ್ಯಕ್ತಿ
ಧರಣಿ (39) ಮೃತ ವ್ಯಕ್ತಿ. ಲಾಕ್ಡೌನ್ ಇದ್ದ ಕಾರಣ ಧರಣಿ ಸಂಬಂಧಿಕರ ಮನೆಗೆ ಬಂದಿದ್ದ. ಈ ವೇಳೆ ಎಳನೀರು ಕುಡಿಯುವ ಬಯಕೆಯಿಂದ ಮನೆಯ ಪಕ್ಕದ ತೆಂಗಿನ ಮರಕ್ಕೆ ಹತ್ತಿದ್ದಾನೆ. ಎಳನೀರು ಕಿತ್ತು ವಾಪಸ್ ಇಳಿಯುವ ವೇಳೆ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ಆತನ ಕೈ ಸೋಕಿದೆ. ಪರಿಣಾಮ ಮರದಿಂದ ಕೆಳಗೆ ಬಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ.