ಹಾಸನ: ಈಕೆಯ ಗಂಡ ಸಾವಿಗೀಡಾಗಿ 5 ವರ್ಷಗಳು ಕಳೆದಿದೆ. ಕಳೆದ ಮೂರು ವರ್ಷದ ಹಿಂದೆ ಈ ಮಹಾಶಯ ನಾನು ನಿನಗೆ ಬಾಳುಕೊಡುವುದಾಗಿ ನಂಬಿಸಿ ಮನೆಯಲ್ಲಿಯೇ ತಾಳಿಕಟ್ಟಿ 2 ವರ್ಷ ಸಂಸಾರ ಮಾಡಿದ್ದ. ಆದರೆ ಇವತ್ತು ಮತ್ತೊಂದು ಮದುವೆಯಾಗಿ ಆಕೆಗೂ ಮೋಸ ಮಾಡಿದ್ದು, ವಿಚಾರ ತಿಳಿದ ಮೊದಲ ಹೆಂಡತಿ ಮದುವೆ ನಿಲ್ಲಿಸುವಷ್ಟರಲ್ಲಿ ಮತ್ತೊಬ್ಬಳಿಗೆ ತಾಳಿಕಟ್ಟಿದ ಹಿನ್ನೆಲೆಯಲ್ಲಿ ಈಗೆ ಇಬ್ಬರ ಮಹಿಳೆಯರ ಪಾಡು ಡೋಲಾಯಮಾನವಾಗಿದೆ. ಇಂತಹ ಒಂದು ಘಟನೆ ಹಾಸನ ನಗರದ ಹೊರವಲಯದ ಬೂವನಹಳ್ಳಿಯಲ್ಲಿ ನಡೆದಿದೆ.
ಕಿರಣ್ ಎಂಬಾತನೇ ಈ ಕೃತ್ಯ ಎಸಗಿರುವ ಯೋಧ. ನಗರದ ಆಶಾ ಎಂಬಾಕೆ ಖಾಸಗಿ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದರು. ಆಕಸ್ಮಿಕವಾಗಿ ಪರಿಚಯವಾದ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ಒಬ್ಬರಿಗೊಬ್ಬರು ನಾಲ್ಕುಗೊಡೆಯ ನಡುವೆಯೇ ಮದುವೆಯಾಗಿದ್ದರಂತೆ. ಇದು ಕಿರಣ್ ಪೋಷಕರಿಗೂ ತಿಳಿದಿತ್ತು ಎನ್ನಲಾಗಿದೆ. ದೇಶ ಸೇವೆಯಲ್ಲಿ ಯೋಧನಾಗಿರುವ ಈತ ಕೆಲಸದ ನಿಮಿತ್ತ ಹೋಗಿದ್ದು, ಕಿರಣ್ ಮದುವೆ ಆಗಿರುವ ಬಗ್ಗೆ ಮೊದಲೇ ಮನೆಯಲ್ಲಿ ತಿಳಿದಿತ್ತು ಎಂದು ಹೇಳಲಾಗಿದೆ.