ಕರ್ನಾಟಕ

karnataka

ETV Bharat / state

ಹಾಸನಾಂಬೆ ದರ್ಶನ ಪಡೆದ ಮೈಸೂರಿನ ಯುವರಾಜ - Yaduvir Wodeyar visited hasanambe temple

ಈಗಷ್ಟೇ ಕೊರೊನಾ ಎಂಬ ಸಂಕಷ್ಟದಿಂದ ಹೊರ ಬಂದಿದ್ದೇವೆ. ದೇವಿಯ ಆಶೀರ್ವಾದ ನಮ್ಮ ವಂಶಸ್ಥರ ಮೇಲೆ ಮತ್ತು ನಾಡಿನ ಜನತೆ ಮೇಲೆ ಇರಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು..

Maharaja Yadavir Wodeyar visited hasanambe temple
ಹಾಸನಾಂಬೆ ದರ್ಶನ ಪಡೆದ ಮೈಸೂರಿನ ಯುವರಾಜ

By

Published : Oct 31, 2021, 10:12 PM IST

ಹಾಸನ : ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆಯ ದರ್ಶನವನ್ನು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಒಡೆಯರ್ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ.

ಹಾಸನಾಂಬೆ ದರ್ಶನ ಪಡೆದ ಮೈಸೂರಿನ ಯುವರಾಜ

ಹಾಸನಾಂಬೆ ತಾಯಿಯ ದರ್ಶನ ಪಡೆದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ದೇವಿಯ ದರ್ಶನ ನನಗೆ ಸಂತಸ ತಂದಿದೆ. ರಾಜ್ಯದ ಪ್ರಸಿದ್ಧ ದೇವಾಯಗಳಲ್ಲಿ ಹಾಸನಾಂಬೆ ದೇವಾಲಯವೂ ಕೂಡ ಒಂದು.

ಈಗಷ್ಟೇ ಕೊರೊನಾ ಎಂಬ ಸಂಕಷ್ಟದಿಂದ ಹೊರ ಬಂದಿದ್ದೇವೆ. ದೇವಿಯ ಆಶೀರ್ವಾದ ನಮ್ಮ ವಂಶಸ್ಥರ ಮೇಲೆ ಮತ್ತು ನಾಡಿನ ಜನತೆ ಮೇಲೆ ಇರಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

ಅಕ್ಟೋಬರ್ 26 ರಿಂದ ನ.6ರವರೆಗೆ ಹಾಸನಾಂಬ ದೇವಾಲಯ ಬಾಗಿಲು ತೆರೆಯಲಿದೆ. ಈ ಬಾರಿ 9 ದಿನಗಳ ಕಾಲ ಹಾಸನಾಂಬೆ ದರ್ಶನ ನೀಡಲಿದ್ದಾಳೆ. ಮೊದಲ ಹಾಗೂ ಕೊನೆಯ ದಿನ ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ. ಉಳಿದಂತೆ ಎಲ್ಲ ದಿನಗಳು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಓದಿ: ಇತಿಹಾಸ ಉಪನ್ಯಾಸಕ, ಸಾಹಿತಿ ಕೊಳ್ಳೇಗಾಲದ ಮಹಾದೇವಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ABOUT THE AUTHOR

...view details