ಕರ್ನಾಟಕ

karnataka

ETV Bharat / state

ಕೈ ಮುಗಿಯುತ್ತೇನೆ, ಹೆಚ್​ಡಿಕೆ ಬಗ್ಗೆ ನನ್ನನ್ನು ಕೇಳಬೇಡಿ: ಮಾಧುಸ್ವಾಮಿ - HDK and BSY meet

ಅವರಿಬ್ಬರೂ ಭೇಟಿ ಮಾಡಿದರೆ ಏನು ತಪ್ಪು? ಅವರಿಬ್ಬರು ಬೇರೆ ಬೇರೆ ಪಕ್ಷದ ಲೀಡರ್. ರಾಜ್ಯದ ಹಿತಾಸಕ್ತಿಗಾಗಿ ಭೇಟಿ ಮಾಡಿದ್ದಾರೆ ಅದನ್ನು ಬೇರೆ ರೀತಿ ತಿಳಿಯಬಾರದು. ಈ ಬಗ್ಗೆ ನನ್ನನ್ನು ಹೆಚ್ಚಿಗೆ ಕೇಳಬೇಡಿ ಎಂದು ಮಾಧುಸ್ವಾಮಿ ಕೈಮುಗಿದಿದ್ದಾರೆ.

Madhuswamy
ಮಾಧುಸ್ವಾಮಿ

By

Published : Nov 15, 2020, 5:22 AM IST

ಹಾಸನ: ಕೈಮುಗಿದು ಕೇಳ್ತಿನಿ.... ಮಾಜಿ ಸಿ ಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಿಎಂ ಯಡಿಯೂರಪ್ಪ ಭೇಟಿ ಮಾಡಿರೋ ವಿಚಾರವನ್ನು ನನ್ನತ್ರ ಕೇಳಬೇಡಿ. ಸಿಎಂ ಯಡಿಯೂರಪ್ಪನವರನ್ನೇ ಕೇಳಿ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದ್ರು.

ಹಾಸನದ ಹಳೇಬೀಡಿನ ದ್ವಾರಸಮುದ್ರ ಕೆರೆಗೆ ಭೇಟಿ ನೀಡಿ ಬಿರುಕು ಬಿಟ್ಟ ಕೆರೆಯ ಏರಿಯನ್ನ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಅವರಿಬ್ಬರೂ ಭೇಟಿ ಮಾಡಿದರೆ ಏನು ತಪ್ಪು? ಅವರಿಬ್ಬರು ಬೇರೆ ಬೇರೆ ಪಕ್ಷದ ಲೀಡರ್. ರಾಜ್ಯದ ಹಿತಾಸಕ್ತಿಗಾಗಿ ಭೇಟಿ ಮಾಡಿದ್ದಾರೆ ಅದನ್ನು ಬೇರೆ ರೀತಿ ತಿಳಿಯಬಾರದು ಎಂದರು.

ಮಾಧುಸ್ವಾಮಿ

ಇನ್ನು ಶಿರಾ ಮತ್ತು ಆರ್.ಆರ್.ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಮೀಲಾಗಿರುವುದು ಶುದ್ಧ ಸುಳ್ಳು. ಯಾವುದೇ ರೀತಿ ಶಾಮೀಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಇಬ್ಬರು ಚುನಾವಣೆಯಲ್ಲಿ ಭಾಗವಹಿಸಿದ್ರು ಅಷ್ಟೆ ಎಂದು ಹೇಳಿದರು.

ಶಾಸಕ ಮುನಿರತ್ನರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ನಾನು ಉತ್ತರ ನೀಡಲು ಸಾಧ್ಯವಿಲ್ಲ. ಯಡಿಯೂಪ್ಪನವರೇ ಸಮರ್ಥರು. ನಾನೇನನ್ನು ಹೇಳೋಲ್ಲಾ ಎಂದ ಅವರು, ಸಚಿವ ಸಂಪುಟದಿಂದ ನಾಲ್ಕು ಮಂದಿಯನ್ನ ಕೈಬಿಡುತ್ತಾರೆ ಎಂಬ ಮಾತಿಗೆ ಈ ಬಗ್ಗೆ ಯಾರ ಜೊತೆಯೂ ಚರ್ಚೆ ನಡೆಸಿಲ್ಲ. ಮುನಿರತ್ನ ಅವರ ಚುನಾವಣೆಯಲ್ಲಿ ಮಂತ್ರಿ ಮಾಡುವುದಾಗಿ ಸಿಎಂ ಹೇಳಿದ್ದಾರೆ ಅದರ ಬಗ್ಗೆಯಷ್ಟೇ ನಾನು ಹೇಳಬಹುದು. ಬೇರೆ ವಿಷಯ ಇದುವರೆಗೂ ಮಾತನಾಡಿಲ್ಲ ಎಂದರು.

ABOUT THE AUTHOR

...view details