ಹಾಸನ :ಲಾಕ್ಡೌನ್ ಜಾರಿಯಿಂದಾಗಿ ಕಬ್ಬು ಕಟಾವ್ ಮಾಡದೆ ಜಮೀನನಲ್ಲೇ ಒಣಗಿ ಹೋಗುತ್ತಿದೆ. ರಾಜ್ಯ ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಮಾಜಿಕ ಅಂತರ ಕಾಯ್ದುಕೊಂಡು ರೈತರು ಪ್ರತಿಭಟನೆ ನಡೆಸಿದರು.
ಕಟಾವಿಗೆ ಬಂದು ಒಣಗಿ ಹೋಗುತ್ತಿದೆ ಕಬ್ಬು ಬೆಳೆ.. ಲಾಕ್ಡೌನ್ನಲ್ಲೂ ರೈತರ ಪ್ರತಿಭಟನೆ..
ಬೆಳೆಯನ್ನು ಕಾರ್ಖಾನೆಯವರು ಕಟಾವು ಮಾಡದೆ ಜಮೀನಲ್ಲಿ ಒಣಗಿ ಹೋಗುತ್ತಿದೆ. ಹೀಗಾಗಿ ದಿಕ್ಕು ತೋಚದಂತಾಗಿದೆ. ಹಾಗಾಗಿ ಬಹುತೇಕ ಹಳ್ಳಿಗಳ ರೈತರು ಮೌನ ಪ್ರತಿಭಟನೆ ನಡೆಸಿದರು.
ರೈತರು ಬೆಳೆದ ಕಬ್ಬು ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಿಕೊಡಿ. ಇಲ್ಲವಾದರೆ ಸರ್ಕಾರವು ಸೂಕ್ತ ಪರಿಹಾರ ಒದಗಿಸಿಕೊಡಬೇಕು. ಬೆಳೆಯನ್ನು ಕಾರ್ಖಾನೆಯವರು ಕಟಾವು ಮಾಡದೆ ಜಮೀನಲ್ಲಿ ಒಣಗಿ ಹೋಗುತ್ತಿದೆ. ಹೀಗಾಗಿ ದಿಕ್ಕು ತೋಚದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು. ಹಾಸನ ತಾಲೂಕಿನ ದುದ್ದ, ಸಾಲಗಾಮೆ ಹೋಬಳಿಗಳ ಹಲಸನಹಳ್ಳಿ, ಆಲದಹಳ್ಳಿ, ಸಾಲಗಾಮೆ, ಕಡಗ, ಹೊಸಳ್ಳಿ, ಮುದಲಪುರ, ಹಳ್ಳಿಕೊಪ್ಪಲು ಸೇರಿ ಬಹುತೇಕ ಹಳ್ಳಿಗಳ ರೈತರು ಮೌನ ಪ್ರತಿಭಟನೆ ನಡೆಸಿದರು.
ಕೆಲ ರೈತರು 60 ರಿಂದ 70 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದಾರೆ. ಅದರಲ್ಲಿ ಈಗಾಗಲೇ 20 ಎಕರೆ ಪ್ರದೇಶದಲ್ಲಿ ಕಟಾವು ಮಾಡಲಾಗಿದೆ. ಉಳಿದದ್ದು ಹಾಗೇ ಉಳಿದಿದೆ. ಎಕರೆಗೆ ಸುಮಾರು 80 ರಿಂದ 100 ಟನ್ ಬೆಳೆ ಬರುತ್ತದೆ. ಫೆಬ್ರವರಿ, ಮಾರ್ಚ್ನಲ್ಲೇ ಕಟಾವು ಮುಗಿಯಬೇಕಿತ್ತು. ಕೊರೊನಾದಿಂದ ಕಾರ್ಖಾನೆಯವರು ಖರೀದಿಗೆ ಮುಂದೆ ಬರುತ್ತಿಲ್ಲ ಎಂದು ರೈತರು ಕಷ್ಟ ವಿವರಿಸಿದರು.