ಹಾಸನ:ಕೊರೊನಾ ಎಂಬ ಹೆಮ್ಮಾರಿ ಜಿಲ್ಲೆಗೆ ಕಾಲಿಟ್ಟ ಬಳಿಕ ಕೆಲವರ ಬದುಕನ್ನೇ ಬದಲಾಯಿಸಿದೆ. ತಮ್ಮ ಬದುಕಿಗಾಗಿ ಕೆಲವೊಂದು ವ್ಯಾಪಾರ ಮಾಡುತ್ತಿದ್ದವರು ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಿದ್ದಾರೆ.
ಒಂದೊಳ್ಳೆ ಸುದ್ದಿ - ಬಿರಿಯಾನಿ ಕಾರ್ನರ್ ಹೋಯ್ತು... ಸಸ್ಯಕಾಶಿ ಬಂತು..!
ಲಾಕ್ಡೌನ್ನಿಂದ ತತ್ತರಿಸಿದ ಜನತೆ ತಮ್ಮ ಜೀವನಾಧಾರಕ್ಕಾಗಿ ಒಂದಲ್ಲಾ ಒಂದು ಉದ್ಯೋಗ ಮಾಡಲು ಮುಂದಾಗಿದ್ದಾರೆ. ಹಾಸನದಲ್ಲಿ ಬಿರಿಯಾನಿ ಕಾರ್ನರ್ ಆರಂಭಿಸಿದ್ದವರೊಬ್ಬರು, ಈಗ ಸಸ್ಯಕಾಶಿ ತೆರೆದಿದ್ದಾರೆ.
ಜನವರಿಯಲ್ಲಿ ಪ್ರಾರಂಭವಾಗಿದ್ದ ನಗರದ ಫೇಮಸ್ ಬಿರಿಯಾನಿ ಕಾರ್ನರ್ ಈಗ ಕೊರೊನಾದಿಂದ ಮೂರು ತಿಂಗಳು ಮುಚ್ಚಿತ್ತು. ಹೀಗಾಗಿ ಆ ಬಿರಿಯಾನಿ ಅಂಗಡಿಯ ಮಾಲೀಕ ರಮೇಶ್ ಮತ್ತು ಅವರ ಮಗ ರಂಜಿತ್ ಹೊಸದೊಂದು ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ.
ಕಳೆದ ತಿಂಗಳು ಹಾಸನದ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ, ಮತ್ತೆ ಬಿರಿಯಾನಿ ಕಾರ್ನರ್ ನಡೆಸಲು ಸಾಧ್ಯವಾಗದೇ ಸಸ್ಯಕಾಶಿ ಮಾಡುವ ಮೂಲಕ ಪರ್ಯಾಯ ಉದ್ಯೋಗದ ಮೂಲಕ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಇವರೊಂದಿಗೆ ನಮ್ಮ ಹಾಸನದ ಪ್ರತಿನಿಧಿ ಸುನೀಲ್ ಕುಂಭೇನಹಳ್ಳಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ.