ಹಾಸನ:ಆರ್ಥಿಕ ಮುಗ್ಗಟ್ಟು ಲಾಕ್ಡೌನ್ ಸಂದರ್ಭದಲ್ಲಿ ಪ್ರತಿಯೊಬ್ಬರ ಬದುಕನ್ನೇ ಬದಲಾಯಿಸಿಬಿಟ್ಟಿತು. ಕೆಲವರಿಗೆ ಹಣದ ಮುಗ್ಗಟ್ಟಿನ ಜೊತೆಗೆ ಅವರು ಮಾಡುತ್ತಿದ್ದ ವ್ಯಾಪಾರ - ವಹಿವಾಟು ಕೆಲಸ ಎಲ್ಲವನ್ನೂ ಬದಲಾಯಿಸಿ ಮತ್ತೊಂದು ಕೆಲಸ ಮಾಡುವಂತೆ ಪ್ರೇರೇಪಿಸಿದೆ.
ಮೂರು ದಶಕಗಳಿಂದ ಕೆಂಪು ದೀಪದ ಕೆಳಗೆ, ಕತ್ತಲು ಪ್ರಪಂಚದೊಳಗೆ ಇದ್ದ ಕೆಂಪು ದೀಪದ ಸುಂದರಿಯರ ಬದುಕನ್ನ ಕೂಡ ಕೊರೊನಾ ಎಂಬ ಡೆಡ್ಲಿ ವೈರಸ್ ಬದಲಾಯಿಸಿದೆ. ತಮ್ಮ ದೇಹವನ್ನು ಕೆಲ ಕಾಲ ಇತರರಿಗೆ ಮಾರಿಕೊಂಡು ಬದುಕುತ್ತಿದ್ದ ''ಕೆಂಪು ದೀಪದ ಸುಂದರಿಯರು'' ತಮ್ಮ ಕೆಲಸವನ್ನು ಬಿಟ್ಟು ಹೊಸ ಜೀವನದ ಕಡೆ ಮುಖ ಮಾಡಿ ಹೊಸ ಕೆಲಸವನ್ನು ಹುಡುಕಿಕೊಂಡಿದ್ದಾರೆ.
ಸಂಸಾರವೆಂಬ ನೌಕೆಯನ್ನು ಸಾಗಿಸಲು ತಮ್ಮ ಮಕ್ಕಳಿಗೆ ತಾವು ಮಾಡುತ್ತಿದ್ದಂತ ಕೆಲಸದ ಸುಳಿವು ಮತ್ತು ನೆರಳು ತಾಗಬಾರದು ಎಂಬ ಒಂದೇ ಒಂದು ಕಾರಣಕ್ಕೆ ಇವತ್ತು ಅವರು ಎಳೆಯ ವಯಸ್ಸಿನಲ್ಲಿ ಮಾಡಿದ ತಪ್ಪಿನ ಅರಿವಾಗಿ ಸ್ವಾವಲಂಬಿಯ ಬದುಕಿನೆಡೆಗೆ ಸಾಗಿದ್ದಾರೆ.
ಹಾಸನದಲ್ಲಿರುವ ಸುಮಾರು ಸಾವಿರದ ನಾಲ್ಕುನೂರು ಮಂದಿ ಈ ''ಕೆಂಪು ದೀಪದ ಸುಂದರಿಯರು'' ಹೊಸದೊಂದು ಸಂಘವನ್ನು ರಚಿಸಿಕೊಂಡು ಸ್ವತಃ ತಾವೇ ವಿವಿಧ ಬಗೆಯ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಅಷ್ಟೇ ಅಲ್ಲ, ಇವರು ತಯಾರಿಸಿರುವ ಉತ್ಪನ್ನಗಳನ್ನು ಸರ್ಕಾರವೇ ಕಂಡುಕೊಳ್ಳುತ್ತಿದೆ. ಹೀಗಾಗಿ ಇವರ ಬದುಕು ಸಮಾಜದ ಮುಖ್ಯವಾಹಿನಿಯ ಕಡೆಗೆ ಸಾಗಿದೆ.
ಹೊಸ ಬದುಕಿನತ್ತ ಪಯಣ ಬೆಳೆಸಿರುವ ಇವರು ತಯಾರಿಸುತ್ತಿರುವ ಹೊಸ ಉತ್ಪನ್ನಗಳು ಯಾವ್ಯಾವು...? ಯಾವ ಯಾವ ಕೆಂಪು ದೀಪದ ಸುಂದರಿಯರು ಯಾವ ಯಾವ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ ಎಂಬ ಸಂಪೂರ್ಣ ವರದಿಯನ್ನು ನಮ್ಮ ಹಾಸನದ ಪ್ರತಿನಿಧಿ ಸುನಿಲ್ ಕುಂಬೇನಹಳ್ಳಿ ನೀಡಿದ್ದಾರೆ.