ಕರ್ನಾಟಕ

karnataka

ETV Bharat / state

ಲಾಕ್​ಡೌನ್​ನಿಂದ ಆಹಾರವಿಲ್ಲದೇ ನರಳಾಡಿದ ಕರುವಿನ ರೋಧನೆ... ವಿಡಿಯೋ ನೋಡಿ - cow

ಒಂದು ಕಡೆ ಹೊಟ್ಚೆ ಹಸಿವು ಮತ್ತೊಂದು ಕಡೆ ಕಾಣದಿರುವ ತಾಯಿಯಿಂದ ಕಂಗಾಲಾದ ಕರುವೂಂದು ರಸ್ತೆಯಲ್ಲಿ ದಿಕ್ಕುತೋಚದೇ ಅಂಬಾ. . . ಅಂಬಾ ಎಂದು ಅರಚುತ್ತಾ ಕಣ್ಣೀರು ಹಾಕಿದ ಮನಕಲಕುವ ದೃಶ್ಯ ಎಂಥಹವರನ್ನ ಕರುಳುಹಿಂಡುವಂತೆ ಮಾಡಿದೆ.

ಕರುವಿನ ರೋಧನೆ
ಕರುವಿನ ರೋಧನೆ

By

Published : Apr 11, 2020, 1:46 PM IST

ಹಾಸನ: ನಗರದ ಬಿಎಂ. ರಸ್ತೆಯಲ್ಲಿ ಲಾಕ್ ಡೌನ್ ಹಿನ್ನೆಲೆ ಹಸಿವಿನಿಂದ ಬಳಲಿದ್ದ ಕರುವೊಂದು ದಿಕ್ಕಾಪಾಲಾಗಿ ಓಡುತ್ತಿದ್ದ ಕರುವಿನ ರೋಧನೆ ಕಂಡು ಪೊಲೀಸರು ಆಹಾರ ಒದಗಿಸಿದರು.

ತನ್ನ ತಾಯಿಯಿಂದ ತಪ್ಪಿಸಿಕೊಂಡು ನಗರದ ಶಂಕರಮಠದ ರಸ್ತೆಯಲ್ಲಿ ಅಡ್ಡಾಡುತ್ತಿತ್ತು. ಅಂಬಾ. . . ಅಂಬಾ ಎಂದು ಅರಚಿಕೊಂಡು ಬಿಎಂ ರಸ್ತೆಗೆ ಬಂದಾಗ ತುರ್ತುವಾಹನದ ಶಬ್ದಕ್ಕೆ ಕಂಗಾಲಾಗಿ ರಸ್ತೆಯಲ್ಲಿಯೇ ಕೆಲವೊತ್ತು ದಿಕ್ಕು ಕಾಣದೆ ನಿಂತುಬಿಟ್ಟಿತು. ನಂತರ ಇದರ ರೋಧನೆಗೆ ಮರುಗಿದ ಪೊಲೀಸರು ಗ್ರೀನ್ ಪೌಂಡೇಷನ್ ಸಂಸ್ಥೆಗೆ ಕರೆ ಮಾಡಿ ಹಸಿದ ಕರುವಿಗೆ ಆಹಾರ ಒದಗಿಸಿದರು.

ಆಹಾರವಿಲ್ಲದೇ ನರಳಾಡಿದ ಕರುವಿನ ರೋಧನೆ

ಒಟ್ಟಾರೆ ದಿನದಿಂದ ದಿನಕ್ಕೆ ಹೆಮ್ಮಾರಿ ಕೊರೊನದಿಂದ ಜನಜೀವನ ದಿನದಿಂದ ದಿನಕ್ಕೆ ಕಠಿಣವಾಗುತ್ತಿದ್ದು, ಮಾನವನಿಗಷ್ಟೇ ಅಲ್ಲದೇ ಪ್ರಾಣಿ ಮತ್ತು ಜಾನುವಾರು ಸಂಕುಲಕ್ಕೂ ಹಸಿವಿನ ಸಂಕಷ್ಟ ತಂದೊಡ್ಡಿದೆ.

ABOUT THE AUTHOR

...view details