ಕರ್ನಾಟಕ

karnataka

ETV Bharat / state

ಹಿಂದಿನ ಸರ್ಕಾರ ನೀಡಿದಂತೆ ಈಗಲೂ ಆಲೂಗಡ್ಡೆಗೆ ಸಬ್ಸಿಡಿ ನೀಡಲಿ: ರೇವಣ್ಣ ಆಗ್ರಹ - hassan news

ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕ್ವಿಂಟಲ್ ಬಿತ್ತನೆ ಆಲೂಗಡ್ಡೆಗೆ 1200 ರೂ. ಇತ್ತು. ಜೊತೆಗೆ ಔಷಧಿಗೆ ಸಬ್ಸಿಡಿ ಕೊಡಲಾಗಿತ್ತು. ಆದರೆ ಇಂದು ಜಿಲ್ಲಾಧಿಕಾರಿಗಳಿಗೂ ಬಿತ್ತನೆ ಆಲೂ ಬಗ್ಗೆ ಮಾಹಿತಿ ಇಲ್ಲ. ನಾನು ಹೇಳಿದ ಮೇಲೆ ಜನಪ್ರತಿನಿಧಿಗಳು ಮತ್ತು ವರ್ತಕರು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದಾರೆ ಅಂತ ಮಾಜಿ ಸಚಿವ ಹೆಚ್​​.ಡಿ.ರೇವಣ್ಣ ಹೇಳಿದ್ದಾರೆ.

Let the potatoes be subsidized as given like previous government
ಹಿಂದಿನ ಸರ್ಕಾರ ನೀಡಿದಂತೆ ಈಗಲೂ ಆಲೂಗೆಡ್ಡೆಗೆ ಸಬ್ಸಿಡಿ ನೀಡಲಿ: ಮಾಜಿ ಸಚಿವ ರೇವಣ್ಣ ಆಗ್ರಹ

By

Published : May 7, 2020, 11:21 PM IST

ಹಾಸನ: ಬಿತ್ತನೆ ಆಲೂಗಡ್ಡೆಗೆ ಹಿಂದಿನ ಸರ್ಕಾರ ಸಬ್ಸಿಡಿ ನೀಡಿದಂತೆ ಈ ಸರ್ಕಾರವೂ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1 ಲಕ್ಷ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆಯನ್ನು ಬೆಳೆಯಲಾಗುತಿತ್ತು. ಕಳೆದ ಹ್ತತಾರು ವರ್ಷಗಳಿಂದ ಆಲೂಗಡ್ಡೆಗೆ ಅಂಗಮಾರಿ ರೋಗ ತಗುಲಿ ಈಗ 15ರಿಂದ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆಯನ್ನು ರೈತರು ಬೆಳೆಯುತ್ತಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕ್ವಿಂಟಾಲ್ ಬಿತ್ತನೆ ಆಲೂಗಡ್ಡೆಗೆ 1200 ರೂ. ಇತ್ತು. ಜೊತೆಗೆ ಔಷಧಿಗೆ ಸಬ್ಸಿಡಿ ಕೊಡಲಾಗಿತ್ತು. ಆದರೆ ಇಂದು ಜಿಲ್ಲಾಧಿಕಾರಿಗಳಿಗೂ ಬಿತ್ತನೆ ಆಲೂ ಬಗ್ಗೆ ಮಾಹಿತಿ ಇಲ್ಲ. ನಾನು ಹೇಳಿದ ಮೇಲೆ ಜನಪ್ರತಿನಿಧಿಗಳು, ವರ್ತಕರು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದಾರೆ ಎಂದರು.

ಸೋಮವಾರದಿಂದ ಬಿತ್ತನೆ ಆಲೂಗಡ್ಡೆ ಬೀಜದ ಮಾರಾಟ ಎಪಿಎಂಸಿ ಮಾರುಕಟ್ಟೆಯಲ್ಲಿ ಆರಂಭಗೊಳ್ಳಲಿದೆ. ಸಣ್ಣ ಬಿತ್ತನೆ ಆಲೂಗಡ್ಡೆ ಕ್ವಿಂಟಾಲ್​​ಗೆ 2,250 ರೂ., ದಪ್ಪ ಆಲೂಗಡ್ಡೆ ಕ್ವಿಂಟಾಲ್​ಗೆ 1,150 ರೂ. ಎಂದು ನಿಗದಿ ಮಾಡಲಾಗಿದೆ. 8 ಕೋಲ್ಡ್ ಸ್ಟೋರೆಜ್​ನಲ್ಲಿ 1,30,888.9 ಕ್ವಿಂಟಾಲ್ ಬಿತ್ತನೆ ಆಲುಗಡ್ಡೆಯಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಗಳು ನಿಗದಿ ಮಾಡಿರುವ ದರಕ್ಕಿಂತ ಹೆಚ್ಚಿನ ಬೆಲೆಗೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುವಂತಿಲ್ಲ. ಬೇಕಾದರೆ ಕಡಿಮೆ ಬೆಲೆಗೆ ವ್ಯಾಪಾರ ಮಾಡಬಹುದಾಗಿದೆ. ಖರೀದಿ ಮಾಡಿದ ದಿನವೇ ರೈತರಿಗೆ ಗೊಬ್ಬರ ಮತ್ತು ಔಷಧಿ ಕೊಡಬೇಕು. ಇದರಿಂದ ರೈತರು ಮತ್ತೆ ಮತ್ತೆ ತಿರುಗಬಾರದು. ಇದಕ್ಕೆ ಶೇ. 50ರಷ್ಟು ಸಬ್ಸಿಡಿ ಕೊಡಬೇಕು ಎಂದಿದ್ದಾರೆ.

ABOUT THE AUTHOR

...view details