ಹಾಸನ:ಜಿಲ್ಲೆಯ ಮೂಲೇಕಾಳೇನಹಳ್ಳಿ ಗ್ರಾಮದಲ್ಲಿಯ ಹೊರವಲಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಗಂಡು ಚಿರತೆಯೊಂದು ಬಿದ್ದಿದೆ. ಗ್ರಾಮದ ಅಶೋಕ್ ಎಂಬುವರ ತೋಟದಲ್ಲಿ ಇಡಲಾಗಿದ್ದ ಬೋನಿಗೆ ಈ ಚಿರತೆ ಬಿದ್ದಿದ್ದು ಗ್ರಾಮಸ್ಥರಲ್ಲಿ ನಿರಾಳತೆ ಮೂಡಿದೆ.
ಕೊನೆಗೂ ಬೋನಿಗೆ ಬಿದ್ದ ಗಂಡು ಚಿರತೆ! ನಿಟ್ಟುಸಿರುಬಿಟ್ಟ ಗ್ರಾಮಸ್ಥರು - leopard
ಗ್ರಾಮೀಣ ಪ್ರದೇಶಗಳಲ್ಲಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ಭಯ ಹುಟ್ಟಿಸಿದ್ದ ಚಿರತೆಯೊಂದು ಕೊನೆಗೂ ಬೋನಿಗೆ ಬಿದ್ದಿದೆ.
ಹೊಳೆನರಸಿಪುರ ಭಾಗದಲ್ಲಿ ಚಿರತೆ ಹಾವಳಿಗಳು ಹೆಚ್ಚಾಗಿದ್ದು ಪ್ರತಿನಿತ್ಯ ಈ ಭಾಗದ ಜನರು ಜೀವವನ್ನು ಕೈಯಲ್ಲಿ ಹಿಡಿದು ಕೃಷಿ ಕಾರ್ಯವನ್ನು ಮಾಡುವಂತಹ ಪರಿಸ್ಥಿತಿ ಇದೆ. ಕಾರಣ ಈ ಭಾಗದ ಗುಡ್ಡಗಾಡು ಪ್ರದೇಶದಲ್ಲಿ 40ಕ್ಕೂ ಅಧಿಕ ಗಾಳಿಯಂತ್ರವನ್ನು ಅಳವಡಿಸಿದ ಪರಿಣಾಮ ಕುರುಚಲು ಪ್ರದೇಶದಲ್ಲಿ ವಾಸವಾಗಿದ್ದ ಚಿರತೆಗಳು ಗಾಳಿ ಯಂತ್ರದ ಶಬ್ದಕ್ಕೆ ಹೊರಬರುತ್ತಿವೆ. ಮತ್ತೊಂದೆಡೆ ಗುಡ್ಡಗಾಡು ಪ್ರದೇಶದಲ್ಲಿ ಕಲ್ಲು ಕೋರೆ ಮತ್ತು ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ಕಾಡು ನಾಶವಾಗುತ್ತಿದ್ದು ಚಿರತೆಗಳು ಆಹಾರವನ್ನು ಅರಿಸಿ ನಾಡಿನತ್ತ ದಾಪುಗಾಲಿಡುತ್ತಿದೆ ಎನ್ನಲಾಗುತ್ತಿದೆ.
ಇಂದು ಸೆರೆಯಾದ ಚಿರತೆಯನ್ನ ಸದ್ಯ ಅರಣ್ಯ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದು, ಸುಮಾರು ಒಂದೂವರೆ ವರ್ಷದ ಗಂಡು ಚಿರತೆ ಮರಿ ಎನ್ನಲಾಗಿದೆ. ಇನ್ನು ಮೇಲಾಧಿಕಾರಿಗಳ ಆದೇಶದ ಮೇರೆಗೆ ಚಿರತೆಯನ್ನೂ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅರಣ್ಯ ಸಿಬ್ಬಂದಿ ತಿಳಿಸಿದೆ.