ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಸೆರೆ - leopard captured in hasan

ಚಿರತೆ ಕಾಟದಿಂದ ಹೈರಾಣಾಗಿದ್ದ ಜನತೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ದಿಂಡಗೂರು ಗ್ರಾಮದ ಹೊರವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಕೊನೆಗೂ ಸೆರೆ ಹಿಡಿದಿದೆ.

leopard captured in hasan
ಹಾಸನದಲ್ಲಿ ಭಯ ಹುಟ್ಟಿಸಿದ್ದ ಚಿರತೆ ಸೆರೆ

By

Published : Jun 8, 2021, 5:41 PM IST

ಹಾಸನ:ಒಂದು ತಿಂಗಳಲ್ಲಿ ಕರು, ಮೇಕೆ, ನಾಯಿಯನ್ನು ತಿಂದು ಭೀತಿ ಹುಟ್ಟಿಸಿದ್ದ ಚಿರತೆಯನ್ನು ಚನ್ನರಾಯಪಟ್ಟಣ ತಾಲೂಕಿನ ದಿಂಡಗೂರು ಗ್ರಾಮದ ಹೊರವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಸೆರೆ ಹಿಡಿದಿದೆ.

ಹಾಸನದಲ್ಲಿ ಭಯ ಹುಟ್ಟಿಸಿದ್ದ ಚಿರತೆ ಸೆರೆ

ಚಿಕ್ಕೇನಹಳ್ಳಿ ಗ್ರಾಮದ ರೈತ ಪ್ರಭು ಎಂಬುವವರ ಜಮೀನಿನಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಐದು ದಿನಗಳ ಹಿಂದೆ ಚಿರತೆ ಸೆರೆಗೆ ಬೋನ್ ಇಡಲಾಗಿತ್ತು. ಪ್ರಭು ಅವರ ತೋಟದ ಫಾರಂಹೌಸ್​​ನಲ್ಲಿ ಅನೇಕ ಕುರಿಗಳನ್ನು ತಿಂದಿದ್ದ ಚಿರತೆಗಳನ್ನು ಅರಣ್ಯ ಸಿಬ್ಬಂದಿ ಹಿಡಿದಿದ್ದಾರೆ. ನಮ್ಮ ಮನೆಯಲ್ಲಿದ್ದ ಹಸುಗಳನ್ನ ಬೋನಿಗೆ ಕಟ್ಟಿ ಚಿರತೆ ಹಿಡಿಯಲು ಸಹಕಾರ ನೀಡಿದ್ದೇನೆ. ಹಸುಗಳನ್ನು ಬೋನ್​ ಬಳಿ ಕಟ್ಟಿದಾಗ ಚಿರತೆಗಳು ಕುರಿಯನ್ನು ತಿಂದು ಹೋಗಿವೆ. ಇದಕ್ಕಾಗಿ ನನಗೆ ಪರಿಹಾರ ನೀಡಿ ಎಂದು ಪ್ರಭು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಚಿರತೆ ವಶಕ್ಕೆ ಪಡೆಯಲು ಬಂದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಭಾಗದಲ್ಲಿ ನಾಲ್ಕು ಚಿರತೆಗಳು ಓಡಾಡಿಕೊಂಡು ಭೀತಿ ಮೂಡಿಸಿವೆ. ಅವುಗಳನ್ನೂ ಹಿಡಿದು ನಂತರ ಈ ಚಿರತೆ ಕೊಂಡೊಯ್ಯಿರಿ ಎಂದು ಆಗ್ರಹಿಸಿದರು. ಬಳಿಕ ಅರಣ್ಯಾಧಿಕಾರಿಗಳು ಚಿರತೆಗಳನ್ನು ಹಿಡಿಯುವ ಭರವಸೆ ನೀಡಿ ಚಿರತೆ ತೆಗೆದುಕೊಂಡು ಹೋಗಿದ್ದಾರೆ.

ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಸಿಇಟಿ ಅಂಕ ಪರಿಗಣನೆ ಉತ್ತಮ ನಿರ್ಧಾರ: ಸಚಿವ ಸುರೇಶ್ ಕುಮಾರ್

ABOUT THE AUTHOR

...view details