ಅರಕಲಗೂಡು: ತಾಲೂಕಿನ ಸಂತೆಮರೂರು ಗ್ರಾಮದಲ್ಲಿ ಜಮೀನಲ್ಲಿ ಮೇಯಲು ಕಟ್ಟಿದ್ದ ಆಡಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.
ಸಂತೆಮರೂರು ಗ್ರಾಮದಲ್ಲಿ ಚಿರತೆ ದಾಳಿ: ಮೇಯಲು ಕಟ್ಟಿದ್ದ ಆಡು ಸಾವು - ಸಂತೆಮರೂರು ಗ್ರಾಮದಲ್ಲಿ ಚಿರತೆ ದಾಳಿ
ಸಂತೆಮರೂರು ಗ್ರಾಮದಲ್ಲಿ ಜಮೀನಲ್ಲಿ ಮೇಯಲು ಕಟ್ಟಿದ್ದ ಆಡಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಸುಮಾರು 10 ಸಾವಿರ ರೂ. ಬೆಲೆ ಬಾಳು ಆಡು ಚಿರತೆ ದಾಳಿಯಿಂದ ಸಾವಿಗೀಡಾಗಿದೆ.
ಚಿರತೆ ದಾಳಿ: ಮೇಯಲು ಕಟ್ಟಿದ್ದ ಆಡು ಸಾವು
ಗ್ರಾಮದ ಹರೀಶ್ ಎಂಬುವರು ಮಧ್ಯಾಹ್ನ ಜಮೀನಲ್ಲಿ ಆಡನ್ನು ಕಟ್ಟಿ ಹಾಕಿ ಊಟ ಮಾಡಲು ಮನೆಗೆ ಬಂದಿದ್ದಾರೆ. ಈ ವೇಳೆ ಪಕ್ಕದ ಪೊದೆಯೊಳಗೆ ಅವಿತಿದ್ದ ಚಿರತೆ ಆಡಿನ ಮೇಲೆರಗಿ ಸಾಯಿಸಿದೆ. ಸುಮಾರು 10 ಸಾವಿರ ರೂ. ಬೆಲೆ ಬಾಳುವ ಆಡು ಚಿರತೆ ದಾಳಿಯಿಂದ ಸಾವಿಗೀಡಾಗಿದೆ ಎನ್ನಲಾಗಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.