ಹಾಸನ: ದೇವೇಗೌಡರು ತಮ್ಮ ಧರ್ಮಪತ್ನಿ ಚನ್ನಮ್ಮನವರನ್ನ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿಬಿಟ್ಟರೆ, ನಿಜಕ್ಕೂ ಈ ದೇಶದಲ್ಲಿ ಮತ್ತೊಂದು ಪುಣ್ಯ ಕೆಲಸ ಮಾಡಿದಂತಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಕುಟುಂಬ ರಾಜಕಾರಣದ ವಿರುದ್ಧ ವ್ಯಂಗ್ಯವಾಡಿದರು.
ದೇವೇಗೌಡರ ಕುಟುಂಬ ರಾಜಕಾರಣಕ್ಕೆ ವ್ಯಂಗ್ಯವಾಡಿದ ವಿಧಾನ ಪರಿಷತ್ ಸದಸ್ಯ ಪ್ರಾಣೇಶ್! - undefined
ಮುಂದಿನ ಬಾರಿಯಾದರೂ ನಿಮ್ಮ ಪತ್ನಿಯನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಲೋಕಸಭೆಗೆ ಕಳುಹಿಸಿ. ಆಗ ಮಾತ್ರ ನಿಮಗೆ ಪುಣ್ಯ ಬರುತ್ತೆ. ಇಲ್ಲ ಅಂದರೆ ನಿಮಗೆ ಮುಂದಿನ ದಿನದಲ್ಲಿ ಪುಣ್ಯ ಲಭಿಸದು ಎಂದು ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ದೇವೇಗೌಡರ ವಿರುದ್ಧ ವ್ಯಂಗ್ಯವಾಡಿದ್ದಾರೆ.
![ದೇವೇಗೌಡರ ಕುಟುಂಬ ರಾಜಕಾರಣಕ್ಕೆ ವ್ಯಂಗ್ಯವಾಡಿದ ವಿಧಾನ ಪರಿಷತ್ ಸದಸ್ಯ ಪ್ರಾಣೇಶ್!](https://etvbharatimages.akamaized.net/etvbharat/images/768-512-2780415-969-a33781b6-d486-45eb-96ac-7b93545bc441.jpg)
ಹಾಸನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚೆನ್ನಮ್ಮರವರು ದೇವೇಗೌಡರ ಪತ್ನಿಯಾಗಿ, ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಹಾಗೂ ಕುಮಾರಸ್ವಾಮಿ ಅವರಿಗೆ ತಾಯಿಯಾಗಿ, ಹಾಗೂ ಲೋಕಸಭೆಗೆ ಸ್ಪರ್ಧಿಸಿರುವ ಮೊಮ್ಮಕಳಿಗೆ ಅಜ್ಜಿಯಾಗಿರುವ ಅವರನ್ನ ಕಡೆ ಪಕ್ಷ ಲೋಕಸಭಾ ಸದಸ್ಯರನ್ನಾಗಿ ಮಾಡದಿದ್ದರೇ ಅದು ಕುಟುಂಬದ ದುರಂತವಲ್ಲವೇ...? ಎಂದು ಕಾಲೆಳೆದರು.
ಹೀಗಾಗಿ ಮುಂದಿನ ಬಾರಿಯಾದರೂ ತಮ್ಮ ಪತ್ನಿಯನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಲೋಕಸಭೆಗೆ ಕಳುಹಿಸಿ. ಆಗ ಮಾತ್ರ ನಿಮಗೆ ಪುಣ್ಯ ಬರುತ್ತೆ. ಇಲ್ಲ ಅಂದರೆ ನಿಮಗೆ ಮುಂದಿನ ದಿನದಲ್ಲಿ ಪುಣ್ಯ ಲಭಿಸದು ಎಂದು ವ್ಯಂಗ್ಯವಾಡಿದ್ದಾರೆ.