ಹಾಸನ: ಆಗಸ್ಟ್ 31ರಂದು ಪಿಯುಸಿ ದಾಖಲಾತಿಗೆ ಕೊನೆ ದಿನ ಆಗಿರುವುದರಿಂದ ಕಾಲೇಜಿಗೆ ನೂರಾರು ವಿದ್ಯಾರ್ಥಿಗಳು ಆಗಮಿಸಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ ರೈಲಿಂಗ್ ಪಟ್ಟಿ ಮುರಿದು ಒಬ್ಬರ ಮೇಲೊಬ್ಬರು ಬಿದ್ದಿರುವ ಘಟನೆ ಇಲ್ಲಿನ ಶಾಲೆಗಾಮಿ ರಸ್ತೆಯ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದಿದೆ.
ದಾಖಲಾತಿಗಾಗಿ ನೂಕುನುಗ್ಗಲು: ರೈಲಿಂಗ್ ಪಟ್ಟಿ ಮುರಿದು ನೆಲಕ್ಕುರುಳಿದ ವಿದ್ಯಾರ್ಥಿಗಳು - College of Art
ಇಂದು ಅರ್ಜಿ ಸಲ್ಲಿಕೆಗೆ ಕೊನೆ ದಿನವಾದ ಹಿನ್ನೆಲೆ ಇಲ್ಲಿನ ಕಲಾ ಕಾಲೇಜಿಗೆ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಇದೇ ವೇಳೆ ಸಾಲು ನಿಲ್ಲುವಾಗ ನೂಕುನುಗ್ಗಲು ಏರ್ಪಟ್ಟಿದ್ದು, ಕಟ್ಟಡಕ್ಕೆ ಹಾಕಿದ್ದ ರೈಲಿಂಗ್ ಪಟ್ಟಿ ಮುರಿದು ಬಿದ್ದಿದೆ.
ಈಗಾಗಲೇ ಪಿಯುಸಿ ಹಾಗೂ ಪದವಿ ಕಾಲೇಜುಗಳ ಪ್ರವೇಶಾತಿ ಆರಂಭವಾಗಿದೆ. ಆನ್ಲೈನ್ನಲ್ಲೂ ಅರ್ಜಿ ಸಲ್ಲಿಕೆಗೆ ಮಂಡಳಿ ವ್ಯವಸ್ಥೆ ಕಲ್ಪಿಸಿತ್ತಾದರೂ, ಇಂದು ಅರ್ಜಿ ಸಲ್ಲಿಕೆಗೆ ಕೊನೆ ದಿನವಾದ ಹಿನ್ನೆಲೆ ಇಲ್ಲಿನ ಕಲಾ ಕಾಲೇಜಿಗೆ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಇದೇ ವೇಳೆ ಸಾಲು ನಿಲ್ಲುವಾಗ ನೂಕುನುಗ್ಗಲು ಏರ್ಪಟ್ಟಿದ್ದು, ಕಟ್ಟಡಕ್ಕೆ ಹಾಕಿದ್ದ ರೈಲಿಂಗ್ ಪಟ್ಟಿ ಮುರಿದು ಬಿದ್ದಿದೆ.
ಇದರಿಂದಾಗಿ ವಿದ್ಯಾರ್ಥಿಗಳು ಒಮ್ಮೆಲೆ ಕೆಳಗೆ ಬಿದ್ದಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಗರ ಠಾಣಾ ಪೊಲೀಸರು ವಿದ್ಯಾರ್ಥಿಗಳನ್ನು ತಡೆದು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.