ಕರ್ನಾಟಕ

karnataka

ETV Bharat / state

ಆಸ್ಪತ್ರೆಯಿಂದ ಚರ್ಚ್‌ಗೆ ಹೋದ ಸೋಂಕಿತೆ.. ದೇವರೇ ನನ್ನ ಉಳಿಸಪ್ಪ ಎಂದು ದೇವರಿಗೆ ಮೊರೆ.. - ಸಿಎಸ್ಐ ದೇವಾಲಯ

ಪ್ರಪಂಚ ಆಧುನಿಕವಾಗಿ ಎಷ್ಟೇ ಬೆಳೆದರೂ ಕೊನೆಗೆ ನಮ್ಮನ್ನು ರಕ್ಷಣೆ ಮಾಡುವವನು ದೇವರು. ಹಾಗಾಗಿ, ದೈವ ಭಕ್ತೆಯಾಗಿರುವ ಈಕೆ ಕೋವಿಡ್-19 ಚಿಕಿತ್ಸೆಗೆ ಒಳಗಾಗಿದ್ದರೂ, ಅದಕ್ಕಿಂತ ಮಿಗಿಲಾಗಿದ್ದು ದೇವರು..

Women pray
Women pray

By

Published : Apr 24, 2021, 10:20 PM IST

Updated : Apr 24, 2021, 10:42 PM IST

ಹಾಸನ: ಕೊರೊನಾ ಸೋಂಕಿತೆಯೊಬ್ಬರು ಆಸ್ಪತ್ರೆಯಿಂದ ಯಾರಿಗೂ ಗೊತ್ತಾಗದಂತೆ ಹೊರ ಬಂದು ಚರ್ಚ್‌ವೊಂದರಲ್ಲಿ ಪ್ರಾರ್ಥನೆ ಮಾಡಿದ ಘಟನೆ ಹಾಸನ ನಗರದಲ್ಲಿನಡೆದಿದೆ.

ಆಸ್ಪತ್ರೆಯ ಪಕ್ಕದಲ್ಲೇ ಇರುವ ಚರ್ಚ್ ಎದುರು ದೇವರೇ ನನ್ನನ್ನು ಉಳಿಸಪ್ಪಾ ಎಂದು ಕಣ್ಣೀರಿಟ್ಟು ದೇವರಿಗೆ ಪ್ರಾರ್ಥನೆ ಸಲ್ಲಿಸಿದಾರೆ. ಇಂತಹ ಘಟನೆ 1ದಿನ ಹಿಂದೆ ನಡೆದಿದೆ.

ಹಾಸನ ನಗರದ ರೇಸ್ಕೋರ್ಸ್ ರಸ್ತೆಯಲ್ಲಿರುವ ಸಿಎಸ್ಐ ದೇವಾಲಯದ ಎದುರು ತಂದೆ ಏಸು ನನ್ನನ್ನು ಉಳಿಸು. ನನ್ನನ್ನ ಕೊರೊನಾದಿಂದ ಮುಕ್ತಗೊಳಿಸಪ್ಪ ಎಂದು ಮಹಿಳೆಯೊಬ್ಬರು ದೇವರಿಗೆ ಮೊರೆ ಇಟ್ಟಿದ್ದಾರೆ.

ಆಸ್ಪತ್ರೆಯಿಂದ ಚರ್ಚ್‌ಗೆ ಹೋದ ಸೋಂಕಿತೆ

ಬಳಿಕ ಕುಟುಂಬದ ಸದಸ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ಮನವೊಲಿಸಿ ಪುನಃ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಪಂಚ ಆಧುನಿಕವಾಗಿ ಎಷ್ಟೇ ಬೆಳೆದರೂ ಕೊನೆಗೆ ನಮ್ಮನ್ನು ರಕ್ಷಣೆ ಮಾಡುವವನು ದೇವರು. ಹಾಗಾಗಿ, ದೈವ ಭಕ್ತೆಯಾಗಿರುವ ಈಕೆ ಕೋವಿಡ್-19 ಚಿಕಿತ್ಸೆಗೆ ಒಳಗಾಗಿದ್ದರೂ, ಅದಕ್ಕಿಂತ ಮಿಗಿಲಾಗಿದ್ದು ದೇವರು.

ಆತ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬ ಅಚಲ ಭಕ್ತಿಯಿಂದ ಆಕೆ ಆಸ್ಪತ್ರೆಯಿಂದ ಹೊರ ಬಂದು ಪ್ರಾರ್ಥನೆ ಸಲ್ಲಿಸುವ ಮೂಲಕ ಕಣ್ಣೀರಿಟ್ಟಿದ್ದಾರೆ. ಇನ್ನು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Last Updated : Apr 24, 2021, 10:42 PM IST

ABOUT THE AUTHOR

...view details