ಕರ್ನಾಟಕ

karnataka

ETV Bharat / state

ಆಮ್ಲಜನಕದ ಕೊರತೆ: ಬಾಳೆಕಾಯಿ ಗುಂಡಿಯಲ್ಲಿ ಉಸಿರುಗಟ್ಟಿ ಇಬ್ಬರು ದುರ್ಮರಣ - ಬಾಳೆಕಾಯಿ ಮಾಗಿಸುವ ಗುಂಡಿ

ಬಾಳೆಕಾಯಿ ಮಾಗಿಸುವ ಗುಂಡಿಯಿಂದ ಬಾಳೆಹಣ್ಣಿನ ಗೊನೆ ತೆಗೆಯಲು ಹೋದಾಗ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಹಾಸನ ತಾಲೂಕಲ್ಲಿ ನಡೆದಿದೆ.

ಉಸಿರುಗಟ್ಟಿ ಇಬ್ಬರು ಸಾವು

By

Published : Mar 31, 2019, 11:46 PM IST

ಹಾಸನ: ಬಾಳೆಕಾಯಿ ಮಾಗಿಸುವ ಗುಂಡಿಯಿಂದ ಬಾಳೆಹಣ್ಣಿನ ಗೊನೆ ತೆಗೆಯಲು ಹೋದಾಗ ಉಸಿರುಗಟ್ಟಿ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಅಂಚಿಹಳ್ಳಿ ಬಳಿ ನಡೆದಿದೆ.

ಶಾಂತಿಗ್ರಾಮ ಹೋಬಳಿಯ ಅಂಚಿಹಳ್ಳಿ ನಿವಾಸಿಗಳಾದ ವೆಂಕಟೇಶ್(55) ಹಾಗೂ ಮಂಜೇಗೌಡ (50) ಮೃತರು. ಮೊಸಳೆ ಹೊಸಳ್ಳಿ ಸಮೀಪದ ಅಂಚಿಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಐದೂರು ಗ್ರಾಮದ ಜಾತ್ರೆ ಹಿನ್ನೆಲೆಯಲ್ಲಿ ಊರಿನ ಒಂದು ಸ್ಥಳದಲ್ಲಿ ಬಾಳೆಕಾಯಿ ಮಾಗಿಸುವ ಸಲುವಾಗಿ ಗುಂಡಿ ತೆಗೆಯಲಾಗಿತ್ತು. ಗುಂಡಿಯಿಂದ ಬಾಳೆಹಣ್ಣಿನ ಗೊನೆ ತೆಗೆಯಲು ಇಳಿದ ಇಬ್ಬರು ಉಸಿರುಕಟ್ಟಿ ಅಸ್ವಸ್ಥಗೊಂಡು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಗುಂಡಿ ಬಾಗಿಲು ತೆಗೆದ ಕೂಡಲೇ ಇಳಿದ ಕಾರಣ ಕ್ರಿಮಿನಾಶಕದ ವಾಸನೆ ಸೇವಿಸಿ ಅಸ್ವಸ್ಥರಾಗಿದ್ದರು. ಅಲ್ಲದೆ ನೆಲ‌ ಮಾಳಿಗೆಯಲ್ಲಿ ಆಮ್ಲಜನಕದ ಕೊರತೆ ಎದುರಾಗಿತ್ತು. ಕೂಡಲೇ ಅಸ್ವಸ್ಥರನ್ನು ಆಂಬ್ಯುಲೆನ್ಸ್​ನಲ್ಲಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ದಾರಿ ಮಧ್ಯೆಯೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಶಾಂತಿಗ್ರಾಮ ಪೊಲೀಸ್ ಠಾಣೆಯ ಸಬ್ ಇನ್ಸ್​ಪೆಕ್ಟರ್ ಕೃಷ್ಣ ಹಾಗೂ ಸಿಬ್ಬಂದಿ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details