ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಕೆಎಸ್​ಆರ್​ಟಿಸಿ ಬಸ್​ ಸಂಚಾರ ಆರಂಭ: ಒಂದು ಬಸ್​ನಲ್ಲಿ 30 ಪ್ರಯಾಣಿಕರಿಗೆ ಅವಕಾಶ - ಹಾಸನದಲ್ಲಿ ಕೆಎಸ್​ಆರ್​ಟಿಸಿ ಬಸ್​ ಆರಂಭ

ಹಾಸನ ಜಿಲ್ಲಾದ್ಯಂತ ಕೆಎಸ್​ಆರ್​ಟಿಸಿ ಬಸ್​ಗಳು ನಾಳೆಯಿಂದ ರಸ್ತೆಗಿಳಿಯಲಿದ್ದು, ಒಂದು ಬಸ್​ನಲ್ಲಿ 30 ಪ್ರಯಾಣಿಕರಿಗೆ ಅನುಮತಿ ನೀಡಲಾಗಿದೆ. ಚಾಲಕ, ನಿರ್ವಾಹಕ ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ.

KSRTC bus starts across the district
ಜಿಲ್ಲಾದ್ಯಂತ ಕೆಎಸ್​ಆರ್​ಟಿಸಿ ಬಸ್​ ಸಂಚಾರ ಆರಂಭ

By

Published : May 3, 2020, 10:26 PM IST

ಹಾಸನ: ಪ್ರತಿ ತಾಲೂಕಿಗೆ 15 ಕೆಎಸ್​ಆರ್​ಟಿಸಿ ಬಸ್​ಗಳಂತೆ ಒಟ್ಟು 80 ಬಸ್​ಗಳು ಸಂಚಾರ ಆರಂಭಿಸಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರ ನಿಯಂತ್ರಕ ಮಂಜುನಾಥ್ ತಿಳಿಸಿದರು.

ಜಿಲ್ಲಾದ್ಯಂತ ಕೆಎಸ್​ಆರ್​ಟಿಸಿ ಬಸ್​ ಸಂಚಾರ ಆರಂಭ

‘ಈಟಿವಿ ಭಾರತ’ದೊಂದಿಗೆ ಮಾತನಾಡಿದ ಅವರು, ಕೊರೊನಾ ಪ್ರಕರಣದ 3ನೇ ಹಂತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಡಿಲಿಕೆ ಘೋಷಿಸಿದೆ. ನಾಳೆ ಕೇಂದ್ರ ಸ್ಥಾನದಿಂದ ನಗರ ಸಾರಿಗೆ ಬಸ್​ಗಳನ್ನು ಒಳಗೊಂಡಂತೆ ಜಿಲ್ಲೆಯ ಎಂಟು ತಾಲೂಕುಗಳಿಗೆ 15 ಬಸ್​ಗಳು ಸಂಚಾರಿಸಲಿವೆ ಎಂದರು.

ಪ್ರತಿ ಬಸ್​ನಲ್ಲಿ 28ರಿಂದ 30 ಪ್ರಯಾಣಿಕರು ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಚಾಲಕರಿಗೂ ಹಾಗೂ ನಿರ್ವಾಹಕನಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಲಾಗುತ್ತಿದ್ದು, ಬಸ್​ನಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಗರ ಸಾರಿಗೆ ಬಸ್​ಗಳಲ್ಲಿ ಪ್ರಯಾಣಿಕರು ಜಿಗ್​ಜಾಗ್ ರೀತಿಯಲ್ಲಿ ಕುಳಿತು ಪ್ರಯಾಣಿಸಬೇಕು ಎಂದು ಸೂಚಿಸಿದ್ದಾರೆ.

ಹೊರ ಜಿಲ್ಲೆಗಳಿಗೆ ಸದ್ಯಕ್ಕೆ ಯಾವುದೇ ಬಸ್​ಗಳು ಸಂಚರಿಸುತ್ತಿಲ್ಲ. ಜಿಲ್ಲಾಡಳಿತ ಅಥವಾ ಕೇಂದ್ರ ಸ್ಥಾನದಿಂದ ಅನುಮತಿ ಪತ್ರ ನೀಡಿದವರಿಗೆ 25ರಿಂದ 30 ಪ್ರಯಾಣಿಕರನ್ನು ವಿಶೇಷ ವಾಹನ ಎಂದು ಪರಿಗಣಿಸಿ, ಅವರನ್ನು ತಪಾಸಣೆಗೊಳಪಡಿಸಿ ನಂತರ ಕರೆಯಲಾಗುತ್ತದೆ ಎಂದರು.

ಇನ್ನು ಈಗಾಗಲೇ ಕೋವಿಡ್ ಪ್ರಕರಣದಿಂದ ಹಾಸನ ಜಿಲ್ಲೆಯ ವಿವಿಧ ಘಟಕಗಳಿಂದ ಒಟ್ಟಾರೆ 40 ಕೋಟಿಯಷ್ಟು ನಷ್ಟ ಉಂಟಾಗಿದ್ದು, ಮೂರನೇ ಹಂತದಲ್ಲಿ ಶೇಕಡಾ 50ರಷ್ಟು ಬಸ್ ಸಂಚಾರ ಮಾಡಲು ಸರ್ಕಾರ ಅನುಮತಿ ನೀಡಿರುವುದರಿಂದ ನಷ್ಟವನ್ನು ಸರಿದೂಗಿಸಲು ಕೊಂಚಮಟ್ಟಿನ ಅನುಕೂಲವಾಗುತ್ತದೆ. ಇನ್ನು ಕಳೆದ 40 ದಿನಗಳಿಂದ ಸಂಚಾರವಿಲ್ಲದೆ ಡಿಪೋಗಳಲ್ಲಿ ನಿಂತಿದ್ದ ಬಸ್​ಗಳನ್ನು ಇಂದು ಸ್ವಚ್ಛಗೊಳಿಸಿ ಅವುಗಳ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗುತ್ತಿದೆ ಎಂದರು.

ABOUT THE AUTHOR

...view details