ಅರಸೀಕೆರೆ(ಹಾಸನ) : ರಾಜ ಭೀತಿ, ಯುದ್ಧ ಬೀತಿ ಸೇರಿದಂತೆ ಲೋಕ ಕಂಟಕ, ಪ್ರಾಕೃತಿಕ ಕಂಟಕ, ಪ್ರಾದೇಶಿಕ ಕಂಟಕ ಭೂಕಂಪನ ಹೀಗೆ ನಾನಾ ದುಷ್ಪರಿಣಾಮಗಳು ಮನುಕುಲದ ಮೇಲೆ ಬೀರಲಿದೆ. ಮುಂದಿನ ಮೂರು ತಿಂಗಳು ಮನುಕುಲ ಜಾಗರೂಕತೆಯಿಂದ ಇರಬೇಕಾಗುತ್ತದೆ ಎಂದು ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಮತ್ತೊಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
ಲೋಕ ಕಲ್ಯಾಣಾರ್ಥವಾಗಿ ಒಂದು ಮಂಡಲ ಕಾಲ ಶ್ರೀಮಠದಲ್ಲಿ ತಾವು ಕೈಗೊಂಡಿರುವ ಮಹಾರುದ್ರ ಜಪಾಯಾಗದ ಶನಿವಾರದ ಪೂಜಾ ಕಾರ್ಯವನ್ನು ಮುಗಿಸಿ ಸುದ್ದಿಗರೊಂದಿಗೆ ಮಾತನಾಡಿದ ಶ್ರೀಗಳು, ಪ್ರಾಕೃತಿಕ ವಿಕೋಪಗಳ ಭೀತಿ ಒಂದೆಡೆಯಾದರೆ, ಮತ್ತೊಂದೆಡೆ ಮನುಷ್ಯ ಮನುಷ್ಯನನ್ನು ನಂಬದೇ ತನ್ನ ಮನಸ್ಥಿತಿಯ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚನಂತೆ ಆಗುತ್ತಾನೆ. ದೇಹದ ಆಶಕ್ತತೆಯಿಂದ ಹಾದಿ ಬೀದಿಯಲ್ಲಿ ಬಿದ್ದು ಸಾಯುವಂತ ಕಾಲ ಮುಂದಿನ ದಿನಗಳಲ್ಲಿ ಬರಲಿದೆ ಎಂದು ಭವಿಷ್ಯ ನುಡಿದರು.