ಕರ್ನಾಟಕ

karnataka

ETV Bharat / state

ಫೆಬ್ರವರಿಯಲ್ಲಿ ಹೇಳಿದ ಭವಿಷ್ಯ ನಿಜವಾಗಿದೆ, ದೇಶವನ್ನೇ ವರಣ ಅಲ್ಲಾಡಿಸುತ್ತಿದ್ದಾನೆ: ಕೋಡಿಮಠ ಶ್ರೀ - ಮಳೆ ಕುರಿತು ಕೋಡಿಮಠ ಶ್ರೀ ಭವಿಷ್ಯ

ಮುಂಗಾರು ಮಳೆ ಕಳೆದ ಮೇಲೆ ಹಿಂಗಾರು ಕಡಿಮೆಯಾಗುತ್ತದೆ. ಆದರೆ, ಅಕಾಲಿಕ ಮಳೆಗಳು ಹೆಚ್ಚಾಗುತ್ತವೆ. ಆಶ್ವೀಜ ಮಾಸ, ಕಾರ್ತಿಕದಲ್ಲಿ ದೇಶಕ್ಕೆ ಕಷ್ಟ, ಭಂಗ, ನೋವಿದೆ. ರೋಗ ರುಜಿನಗಳು ಹೆಚ್ಚುತ್ತವೆ. ಕಳ್ಳಕಾಕರ ಕಾಟ, ಅಪಮೃತ್ಯಗಳು, ಕೊಲೆಗಳು, ಮತೀಯ ಗಲಭೆಗಳು ಹೆಚ್ಚುತ್ತವೆ. ರಾಜಕೀಯ ಕಲಹ ಉಂಟಾಗಿ ಬೇರೆ ಬೇರೆ ಗುಂಪುಗಳಾಗುತ್ತವೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

Kodi Mutt Swamiji
ಕೋಡಿಮಠ ಶ್ರೀ

By

Published : Aug 3, 2022, 10:34 AM IST

ಹಾಸನ: ಶುಭಕೃತ ನಾಮ ಸಂವತ್ಸರದ ಫಲದಲ್ಲಿ ಗುಡುಗು, ಮಿಂಚು, ಗಾಳಿ, ಮಳೆ ಹೆಚ್ಚಾಗಿ ಪ್ರಕೃತಿ ಅಲ್ಲೋಲ - ಕಲ್ಲೋಲ ಆಗುತ್ತದೆ. ಬಯಲುಸೀಮೆ‌ ಮಲೆನಾಡಾಗುತ್ತದೆ, ಮಲೆನಾಡು ಬಯಲುಸೀಮೆಯಾದಿತು ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ಸಮೀಪದ ಕೋಡಿಮಠದಲ್ಲಿ ಮಾತನಾಡಿದ ಅವರು, ಇದು ಹೀಗೆಯೇ ಮುಂದುವರಿಯುತ್ತದೆ. ಈ ಸಂವತ್ಸರದ ಫಲ ನೋಡಿದರೆ ಮೇಘ ಘರ್ಜಿಸಿತು, ಭೂಮಿ ತಲ್ಲಣಗೊಂಡಿತು. ಭೂಮಿ ಕಂಪಿಸುತ್ತೆ, ಗುಡ್ಡಗಳು ಕುಸಿಯುತ್ತವೆ, ಕೆರೆ ಕಟ್ಟೆಗಳು ಒಡೆದು ಹೋಗುತ್ತವೆ. ಇದು ಈ ಸಂವತ್ಸರದ ಕಡೆಯವರೆಗೂ ಇರುತ್ತೆ ಎಂದರು.

ಕೋಡಿಮಠ ಶ್ರೀ ಭವಿಷ್ಯ

ಮುಂಗಾರು ಮಳೆ ಕಳೆದ ಮೇಲೆ, ಹಿಂಗಾರು ಕಡಿಮೆಯಾಗುತ್ತದೆ. ಆದರೆ, ಅಕಾಲಿಕ ಮಳೆಗಳು ಹೆಚ್ಚಾಗುತ್ತವೆ. ಆಶ್ವೀಜ ಮಾಸ, ಕಾರ್ತಿಕದಲ್ಲಿ ದೇಶಕ್ಕೆ ಕಷ್ಟ, ಭಂಗ, ನೋವಿದೆ. ರೋಗ ರುಜಿನಗಳು ಹೆಚ್ಚುತ್ತವೆ. ಕಳ್ಳಕಾಕರ ಕಾಟ, ಅಪಮೃತ್ಯಗಳು, ಕೊಲೆಗಳು, ಮತೀಯ ಗಲಭೆಗಳು ಹೆಚ್ಚಾತ್ತವೆ. ರಾಜಕೀಯ ಕಲಹ ಉಂಟಾಗಿ ಬೇರೆ ಬೇರೆ ಗುಂಪುಗಳಾಗುತ್ತವೆ. ಮಳೆಯಾದರೂ ಬೆಳೆ ಸಿಕ್ಕಲ್ಲ, ಬೆಳೆ ಬರುತ್ತೆ ಅದನ್ನು ಮಳೆ ತಿನ್ನುತ್ತದೆ. ಶುಭಕೃತ ನಾಮ ಸಂವತ್ಸದ ಅಶುಭವಾಗಿರುತ್ತದೆ. ಬಲಾಢ್ಯ ಪೃಥ್ವಿ ಹೆಚ್ಚುತ್ತ ಹೋಗುತ್ತದೆ. ಆಕಾಶ ಎಲ್ಲಿ ಬೇಕು ಅಲ್ಲಿ ಘರ್ಜಿಸುತ್ತೆ, ಕಂಡಮಂಡಲ ಆಗುತ್ತೆ. ದೊಡ್ಡ ದೊಡ್ಡ ಪಟ್ಟಣಗಳಿಗೆ ಭಂಗವಾಗುತ್ತೆ ಎಂದರು.

ಅಷ್ಟೇ ಅಲ್ಲದೆ, ಮತೀಯ ಗಲಭೆ ಹೆಚ್ಚಾಗುತ್ತದೆ. ಸಾವು - ನೋವು ಇನ್ನೂ ಜಾಸ್ತಿ ಆಗಿ ಅಶಾಂತಿ ಉಂಟಾಗಲಿದೆ. ಕಾರ್ತಿಕ ಆಶ್ವೀಜದಲ್ಲಿ ರಾಷ್ಟ್ರ, ರಾಜ್ಯಮಟ್ಟದ ಗೊಂದಲಗಳು, ಸಾವು - ನೋವುಗಳು ಆಗುವ ಲಕ್ಷಣ ಬಹಳ ಇದೆ. ಜನ ತಲ್ಲಣಗೊಳ್ಳುತ್ತಾರೆ. ಗಾಳಿ, ಮಳೆ, ವೃಕ್ಷಗಳು ಮುರಿದು ಬೀಳುತ್ತವೆ. ವಿಪರೀತ ಮಿಂಚು ಮತ್ತು ಗಾಳಿಯಾಗುತ್ತದೆ. ಸಾವು - ನೋವು ಹೆಚ್ಚಾಗಲಿದೆ. ಜಲಾಶಯಗಳು ತುಂಬಿ ಹರಿಯುತ್ತವೆ. ಕೆಲವು ಕಡೆ ಮಳೆ ಹೋದರೆ ಸಾಕು ಅಂತಾರೆ, ಕೆಲವು ಕಡೆ ಮಳೆ ಬೇಕು ಅಂತಾರೆ ಎಂದು ಶ್ರೀಗಳು ಭವಿಷ್ಯ ಹೇಳಿದ್ದಾರೆ.

ಇದನ್ನೂ ಓದಿ:ಕೇರಳದಲ್ಲಿ ಭಾರಿ ಮಳೆ: ಹತ್ತು ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಣೆ : ಸಾವಿರಾರು ಮಂದಿ ಸ್ಥಳಾಂತರ

ABOUT THE AUTHOR

...view details