ಕರ್ನಾಟಕ

karnataka

ETV Bharat / state

ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಬರುತ್ತೆ: ಕೋಡಿಮಠದ ಶ್ರೀ ಭವಿಷ್ಯ!! - Kodi mata shri prediction about future in arasikere

ಜಗತ್ತಿನಲ್ಲಿ ದೊಡ್ಡ ದೊಡ್ಡ ತಲೆಗಳು ಉರುಳಲಿವೆ, ಸಾಮೂಹಿಕ ಸಾವುಗಳು ಸಂಭವಿಸಲಿವೆ ಎಂದು ಕೋಡಿಮಠದ ಶ್ರೀಗಳು ಮತ್ತೊಂದು ಭವಿಷ್ಯ ನುಡಿದಿದ್ದಾರೆ.

Sri Sivananda Shivayogi Rajendra Swamiji
ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ

By

Published : Jun 1, 2021, 11:02 PM IST

ಹಾಸನ: ರಾಜಕೀಯದ ಭೀತಿಯೊಂದಿಗೆ ಭೂತ ಪ್ರೇತಾತ್ಮಗಳು ಮಾತನಾಡುವುದನ್ನು ನೀವು ಕೇಳಿಸಿಕೊಳ್ಳುತ್ತೀರಾ. ಜೊತೆಗೆ ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಬರಲಿದೆ ಎಂಬ ಭಯಾನಕ ಭವಿಷ್ಯವೊಂದನ್ನು ಜಿಲ್ಲೆಯ ಕೋಡಿಮಠದ ಶ್ರೀಗಳು ನುಡಿದಿದ್ದಾರೆ.

ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾತನಾಡಿದರು

ಹಾಸನದ ಅರಸೀಕೆರೆಯ ಕೋಡಿಮಠದಲ್ಲಿ ಅವರು ಮಾತನಾಡಿ, ಇಂತಹದೊಂದು ಮಾರಣಾಂತಿಕ ಕಾಯಿಲೆ ದೂರವಾಗಲು ಸುಮಾರು 10 ವರ್ಷಗಳೇ ಬೇಕು. ಭೂಮಿಯಲ್ಲಿ ಈಗಾಗಲೇ ಕೋಟ್ಯಂತರ ಜನರನ್ನು ಹೂತಿದ್ದಾರೆ. ಅದೇ ವಿಷವಾಗಿ ಭೂಮಿಯಿಂದ ಹೊರಬರಲಿದೆ. ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಬರಲಿದೆ ಎಂಬ ಭಯಾನಕ ಭವಿಷ್ಯ ನುಡಿದಿರುವ ಅವರು, ಕೊರೊನಾಗಿಂತಲೂ ಭಯಾನಕ ರೋಗ ಬರುತ್ತೆ ನೋಡಿ ಎಂದಿದ್ದಾರೆ.

ಈ ವರ್ಷ "ಕುಂಭದಿ ಗುರು ಬರಲು ತುಂಬುವವು ಕೆರೆ ಕಟ್ಟೆ ಶಂಭುವಿನ ಪದಸಾಕ್ಷಿ ಡಂಬವೆನ್ನೆಲು ಬೇಡಿದೆನಾ ಎಂದ್ರೆ ಪ್ರಳಯದ ಮಳೆ ಆಗಲಿದೆ. ಮಿಂಚಿನಿಂದ ದುರ್ಯೋಗ ಇದೆ. ಜಗತ್ತಿನಲ್ಲಿ ಅಪಾಯಕಾರಿ ಘಟನೆಯೊಂದು ನಡೆಯಲಿದೆ. ಇದ್ರ ಜೊತೆಗೆ ರಾಜಕೀಯದ ಭೀತಿ ಎದುರಾಗಲಿದೆ. ಅಲ್ಲದೇ ಜಗತ್ತಿನಲ್ಲಿ ದೊಡ್ಡ ದೊಡ್ಡ ತಲೆಗಳು ಉರುಳಲಿವೆ. ಸಾಮೂಹಿಕ ಸಾವುಗಳು ಸಂಭವಿಸಲಿವೆ ಎಂದು ಹೇಳಿದ್ದಾರೆ.

ಮೃತರಾದ ನಂತರ ಹೂಳಲ್ಪಟ್ಟವರು ಕೂಡ ಮಾತನಾಡುತ್ತಾರೆ. ಅದನ್ನು ನೀವು ನೋಡಬಹುದು, ಆದರೆ, ನೀವು ಅವರ ಜೊತೆ ಮಾತನಾಡಲು ಸಾಧ್ಯವಿಲ್ಲ. ಇಂತಹ ಪ್ರೇತಾತ್ಮಗಳು ಸದ್ಯದಲ್ಲಿಯೇ ಕಂಡರು ಕಾಣಿಸದಂತಾಗುತ್ತವೆ. ಆದರೆ, ಕರ್ನಾಟಕದಲ್ಲಿ ಅಷ್ಟು ತೊಂದರೆ ಆಗದು ಎಂದು ಅವರು ತಿಳಿಸಿದ್ದಾರೆ.

ಓದಿ:ಭಾರತದ ಮೊಟ್ಟ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಚಿತ್ರದುರ್ಗದಲ್ಲಿ ಪತ್ತೆ..!

ABOUT THE AUTHOR

...view details