ಸಕಲೇಶಪುರ : ಹಾಸನ ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗಗಳಲ್ಲಿ ವಾಹನಗಳು ಸಂಚರಿಸದಂತೆ ರಸ್ತೆಗೆ ಹಾಕಲಾಗಿದ್ದ ಮಣ್ಣನ್ನು ತೆರವುಗೊಳಿಸಲಾಗಿದೆ.
ಕೊಡಗು-ಹಾಸನ ಗಡಿಭಾಗದಲ್ಲಿ ರಸ್ತೆಗೆ ಹಾಕಿದ್ದ ಮಣ್ಣು ತೆರವು.. - ಕೊಡಗು- ಹಾಸನ ಗಡಿಭಾಗದಲ್ಲಿ ರಸ್ತೆಗೆ ಹಾಕಿದ್ದ ಮಣ್ಣು ತೆರವು
ಇದೀಗ ಕೊಡಗು ಕೊರೊನಾ ಮುಕ್ತವಾಗಿದೆ. ಹಾಸನ ಜಿಲ್ಲೆಯಲ್ಲೂ ಯಾವುದೇ ಪ್ರಕರಣ ಕಂಡು ಬರದ ಹಿನ್ನೆಲೆ ತಾಲೂಕು ಪಂಚಾಯತ್ ಸಿಇಒ ಹರೀಶ್ ಆದೇಶದಂತೆ ಮಣ್ಣು ತೆರವುಗೊಳಿಸಲಾಯಿತು.
ಕೊಡಗು- ಹಾಸನ ಗಡಿಭಾಗದಲ್ಲಿ ರಸ್ತೆಗೆ ಹಾಕಿದ್ದ ಮಣ್ಣು ತೆರವು
ಕೊಡಗಿನಲ್ಲಿ ಕೊರೊನಾ ಪ್ರಕರಣ ಕಂಡು ಬಂದ ಹಿನ್ನೆಲೆ ತಾಲೂಕಿನ ವನಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿ ಭಾಗಗಳಾದ ಮಾಗೇರಿ ಮತ್ತು ತಂಬಲಗೇರಿ ಪ್ರದೇಶದಲ್ಲಿ ಮಣ್ಣು ಹಾಕಿ ರಸ್ತೆ ಮುಚ್ಚಲಾಗಿತ್ತು. ಇದೀಗ ಕೊಡಗು ಕೊರೊನಾ ಮುಕ್ತವಾಗಿದೆ. ಹಾಸನ ಜಿಲ್ಲೆಯಲ್ಲೂ ಯಾವುದೇ ಪ್ರಕರಣ ಕಂಡು ಬರದ ಹಿನ್ನೆಲೆ ತಾಲೂಕು ಪಂಚಾಯತ್ ಸಿಇಒ ಹರೀಶ್ ಆದೇಶದಂತೆ ಮಣ್ಣು ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ವನಗೂರು ಗ್ರಾಪಂ ಅಧ್ಯಕ್ಷ ಆನಂದ್ ಹಾಗೂ ಸದಸ್ಯರು ಹಾಜರಿದ್ದರು.