ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಒಂದೇ ದಿನ ಆರು ಮಂದಿಯನ್ನು ಬಲಿ ಪಡೆದ ಕೊರೊನಾ - six people in a single day in Hassan

ಹಾಸನ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 31,595ಕ್ಕೆ ಏರಿಕೆಯಾಗಿದ್ದು, 29,616 ಜನರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. 1,486 ಸಕ್ರಿಯ ಪ್ರಕರಣಗಳಲ್ಲಿ 23 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ
ಕೊರೊನಾ

By

Published : Apr 17, 2021, 9:55 PM IST

ಹಾಸನ: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 216 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆರು ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 31,595ಕ್ಕೆ ಏರಿಕೆಯಾಗಿದ್ದು, 29,616 ಜನರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. 1,486 ಸಕ್ರಿಯ ಪ್ರಕರಣಗಳಲ್ಲಿ 23 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚನ್ನರಾಯಪಟ್ಟಣದ ಮೂವರು, ಅರಸೀಕೆರೆ, ಹಾಸನ, ಸಕಲೇಶಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈವರೆಗೆ 493 ಮಂದಿ ಅಸುನೀಗಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾಧ್ಯಮ ಪ್ರಕಟಣೆ

ಹೊಸದಾಗಿ ಆಲೂರು 8, ಅರಕಲಗೂಡು 8, ಅರಸೀಕೆರೆ 51, ಬೇಲೂರು 7, ಚನ್ನರಾಯಪಟ್ಟಣ 57, ಹಾಸನ 59, ಹೊಳೆನರಸೀಪುರ 15, ಸಕಲೇಶಪುರ 9 ಹಾಗೂ ಇತರೆ ಜಿಲ್ಲೆಯ ಇಬ್ಬರಿಗೆ ಸೋಂಕು ತಗುಲಿದೆ.

ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಅವರಿಗೆ ಕೋವಿಡ್ 19 ದೃಢಪಟ್ಟಿದೆ. ಅವರಿಗೂ ಹೋಂ ಐಸೋಲೇಷನ್​ನಲ್ಲಿರುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ.ಸತೀಶ್ ಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details