ಹಾಸನ : ಜಿಲ್ಲೆಯ ಅರಸೀಕೆರೆಯಲ್ಲಿ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್ ಇದೆ. ಇಲ್ಲಿ 1997ರ ಸ್ವಾಂತತ್ರ್ಯದ ಹೋರಾಟದ ಬದುಕು ಕಣ್ಣಿಗೆ ಕಟ್ಟುವಂತೆ ಕೆಲವೊಂದು ಶಿಲ್ಪಗಳನ್ನು ಕೆತ್ತಲಾಗಿದೆ. ಅಲ್ಲದೆ ಇಲ್ಲಿ ಮಕ್ಕಳ ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಹಲವು ಕೆಲಸಗಳನ್ನು ಮಾಡಲಾಗಿದೆ.
ಮೈಸೂರು-ಅರಸೀಕೆರೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಸಂಸ್ಥೆಯಲ್ಲಿ, ಗಾಂಧೀಜಿಯವರ ಹೋರಾಟದ ದಿನಗಳನ್ನ ಚಿತ್ರದ ಮೂಲಕ ಮತ್ತು ಮೂರ್ತಿಗಳ ಮೂಲಕ ನಿರ್ಮಿಸಲಾಗಿದೆ.
ಸ್ವಾತಂತ್ರದ ದಿನಗಳನ್ನು ನೆನಪಿಸುವ ಅರಸಿಕೆರೆಯ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್ ಇನ್ನು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾತ್ಮಗಾಂಧೀಜಿಯವರ ಅನುಯಾಯಿಗಳಲ್ಲಿ ಒಬ್ಬರಾದ ಹಾಸನದ ಮಾಜಿ ಸಚಿವೆ ದಿ.ಯಶೋಧರಮ್ಮ ದಾಸಪ್ಪರ ಪ್ರಯತ್ನದ ಫಲವಾಗಿ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಸಂಸ್ಥೆ 1945ರಲ್ಲಿ ಹುಟ್ಟಿಕೊಂಡಿತು. ಇದು 80 ಎಕರೆ ಪ್ರದೇಶದಲ್ಲಿ ಸ್ಥಾಪಿತವಾಗಿದೆ. ಕಸ್ತೂರಬಾ ಸಂಸ್ಥೆಗೆ ಸರ್ಕಾರ ನೀಡಿರುವ 85.21 ಎಕರೆ ಜಮೀನಿನಲ್ಲಿ ನೂರಾರು ತೆಂಗಿನ ಮರಗಳಿವೆ.
ಇಲ್ಲಿ ಮಹಿಳೆಯರಿಗೆ ಹೊಲಿಗೆ, ಕಸೂತಿ, ಉಪಕಸುಬು ಹಾಗೂ ಗುಡಿಕೈಗಾರಿಕಾ ಕಲಿಕೆಯ ತರಬೇತಿ ನೀಡಲಾಗುತ್ತಿದೆ. ಅಲ್ಲದೆ ಗೋ ಶಾಲೆಯನ್ನ ತೆರೆಯುವ ಮೂಲಕ ಮೂಕ ಪ್ರಾಣಿಕಗಳ ಸೇವೆ ಕೂಡಾ ಆರಂಭವಾಗಿದೆ. 1990 ರಿಂದ 2004ರ ತನಕ ಸರಕಾರದ ನಾನಾ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ನೌಕರರ ಅಧ್ಯಕ್ಷತೆಯೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಕಾರದಿಂದ ಮಹಿಳೆಯರಿಗೆ ಇಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿತ್ತು.