ಕರ್ನಾಟಕ

karnataka

ETV Bharat / state

ಕಾರ್ಗಿಲ್ ವಿಜಯ ದಿವಸ ಪ್ರಯುಕ್ತ ವೀರ ಯೋಧನಿಗೆ ಸನ್ಮಾನ - Arakkalgodu felicitation of heroic warrior news

ಜುಲೈ 26 ಕಾರ್ಗಿಲ್ ವಿಜಯ ದಿವಸವಾಗಿದೆ. ನಮ್ಮ ಸೈನಿಕರು ದೇಶಕ್ಕಾಗಿ ಹುತಾತ್ಮರಾದ ದಿನವಾಗಿದೆ. ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ದೇಶಕ್ಕಾಗಿ ಪ್ರಾಣತೆತ್ತ ನಮ್ಮ ಯೋಧರಿಗೆ ಟೀಂ ಯೋಧ ಗೆಳೆಯರ ಬಳಗದ ಯುವಕರು ನಮನ ಸಲ್ಲಿಸಿದ್ದಾರೆ.

ವೀರ ಯೋಧನಿಗೆ ಸನ್ಮಾನ
ವೀರ ಯೋಧನಿಗೆ ಸನ್ಮಾನ

By

Published : Jul 28, 2020, 11:13 AM IST

ಅರಕಲಗೂಡು: ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಟೀಂ ಯೋಧ ಗೆಳೆಯರ ಬಳಗದ ಯುವಕರು ಪಟ್ಟಣದ ಕೊತ್ತಲು ಗಣಪತಿ ದೇವಾಲಯದ ಆವರಣದಲ್ಲಿ ವೀರ ಯೋಧನಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು.

ಜುಲೈ 26 ಕಾರ್ಗಿಲ್ ವಿಜಯ ದಿವಸವಾಗಿದೆ. ನಮ್ಮ ಸೈನಿಕರು ದೇಶಕ್ಕಾಗಿ ಹುತಾತ್ಮರಾದ ದಿನವಾಗಿದೆ. ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ದೇಶಕ್ಕಾಗಿ ಪ್ರಾಣ ತೆತ್ತ ನಮ್ಮ ಯೋಧರಿಗೆ ಟೀಂ ಯೋಧ ಗೆಳೆಯರ ಬಳಗದ ಯುವಕರು ನಮನ ಸಲ್ಲಿಸಿದ್ದಾರೆ.

ವೀರ ಯೋಧನಿಗೆ ಸನ್ಮಾನ

ಯೋಧನಿಗೆ ಸನ್ಮಾನಿಸಿ ಮಾತಾನಾಡಿದ ಟೀಂ ಯೋಧ ಗೆಳೆಯರ ಬಳಗದ ಮಧು, ಕಾರ್ಗಿಲ್ ವಿಜಯ ದಿವಸದಂದು ದೇಶಕ್ಕಾಗಿ ಹುತಾತ್ಮರಾದ ಎಲ್ಲಾ ಭಾರತೀಯ ಸೈನಿಕರಿಗೂ ನಮ್ಮ ಗೌರವ ನಮನಗಳನ್ನು ಸಲ್ಲಿಸೋಣ. ಭಾರತದ ಏಕತೆ, ಸಾರ್ವಭೌಮತೆ ಸಂಭ್ರಮಿಸುವ ಜೊತೆಗೆ ಭಾರತೀಯ ಸೇನಾಪಡೆಗಳ ವೀರ ಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಬೆಂಬಲ ಹಾಗೂ ಹೆಮ್ಮೆಯ ಅಭಿನಂದನೆಗಳನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕಮಾಂಡೋ ಬಾಲಾಜಿ ಕುಮಾರ ಎನ್. ಬೇಸ್ತಗೇರಿ ಅವರಿಗೆ ಟೀಂ ಯೋಧ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು. ಬಳಗದ ಯುವಕರಾದ ಗಣೇಶ್, ಚಂದನ್, ತೀರ್ಥಪ್ರಸಾದ್, ಅನಿಲ್ ಉಪಸ್ಥಿತರಿದ್ದರು.

ABOUT THE AUTHOR

...view details