ಕರ್ನಾಟಕ

karnataka

ETV Bharat / state

ವಿದ್ಯುತ್ ಸ್ವೀಕರಣ ಕೇಂದ್ರದ ಸಿಬ್ಬಂದಿ ಮೇಲೆ ಜೆಡಿಎಸ್ ಮುಖಂಡನಿಂದ ಹಲ್ಲೆಗೆ ಯತ್ನ - ಹಾಸನ ಸುದ್ದಿ

ವಿದ್ಯುತ್ ಸಮಸ್ಯೆ ಉಂಟಾದ ಹಿನ್ನೆಲೆ, ಜೆಡಿಎಸ್ ಮುಖಂಡನೊಬ್ಬ ವಿದ್ಯುತ್ ಸ್ವೀಕರಣ ಕೇಂದ್ರದ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾದ ಘಟನೆ ಹಾಸನ ಜಿಲ್ಲೆಯ ಹಳೇಬೀಡು ಹೋಬಳಿಯಲ್ಲಿ ನಡೆದಿದೆ.

JDS leader  tried to attack on Power Receiving Center Staff
ವಿದ್ಯುತ್ ಸ್ವೀಕರಣ ಕೇಂದ್ರದ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ ಜೆಡಿಎಸ್ ಮುಖಂಡ

By

Published : Sep 25, 2020, 7:05 PM IST

ಹಾಸನ (ಹಳೇಬೀಡು): ವಿದ್ಯುತ್ ಸಮಸ್ಯೆ ಉಂಟಾದ ಹಿನ್ನೆಲೆ, ಜೆಡಿಎಸ್ ಮುಖಂಡನೊಬ್ಬ ವಿದ್ಯುತ್ ಸ್ವೀಕರಣ ಕೇಂದ್ರದ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾದ ಘಟನೆ ಜಿಲ್ಲೆಯ ಹಳೇಬೀಡು ಹೋಬಳಿಯಲ್ಲಿ ನಡೆದಿದೆ.

ತಾಂತ್ರಿಕ ದೋಷದಿಂದಾಗಿ ಗುರುವಾರ ಹಳೇಬೀಡು ಹೋಬಳಿಯ ಗಂಗೂರು ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯುಂಟಾಗಿತ್ತು. ಗ್ರಾಮದ ಜೆಡಿಎಸ್ ಮುಖಂಡ ರಾಮಚಂದ್ರ ಎಂಬುವವರು ವಿದ್ಯುತ್​ ಸಮಸ್ಯೆ ಬಗ್ಗೆ ವಿದ್ಯುತ್ ನಿಗಮದ ಕಚೇರಿಗೆ ದೂರು ನೀಡುವ ಬದಲು ತಮ್ಮೂರಿನಲ್ಲಿರುವ ವಿದ್ಯುತ್ ಸ್ವೀಕರಣ ಕೇಂದ್ರಕ್ಕೆ ಏಕಾಏಕಿ ಭೇಟಿ ನೀಡಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು.

ವಿದ್ಯುತ್ ಸ್ವೀಕರಣ ಕೇಂದ್ರದ ಸಿಬ್ಬಂದಿ ಮೇಲೆ ಜೆಡಿಎಸ್ ಮುಖಂಡನಿಂದ ಹಲ್ಲೆಗೆ ಯತ್ನ

ಗಂಗೂರಿನ ವಿದ್ಯುತ್ ಸ್ವೀಕರಣಾ ಕೇಂದ್ರದ ಸಿಬ್ಬಂದಿಯಾದ ಹೇಮಂತ್​ ಎಂಬುವವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ರಾಮಚಂದ್ರ ಎಂಬುವವರ ವಿರುದ್ಧ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ಹಳೇಬೀಡಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.

ABOUT THE AUTHOR

...view details