ಕರ್ನಾಟಕ

karnataka

ETV Bharat / state

ಪ್ರಜ್ವಲ್​ ರೇವಣ್ಣ ಸುಳ್ಳು ದಾಖಲೆ ಸಲ್ಲಿಸಿದ್ದಾರೆ: ಎ.ಮಂಜು ಆರೋಪ - undefined

ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಚುನಾವಣ ಆಯೋಗಕ್ಕೆ ಸುಳ್ಳು ದಾಖಲಾತಿ ನೀಡಿದ್ದಾರೆ ಎಂದು ಎ.ಮಂಜು ಆರೋಪಿಸಿದ್ದು, ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಎ.ಮಂಜು

By

Published : Mar 27, 2019, 10:17 PM IST

ಹಾಸನ: ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಚುನಾವಣಾ ಆಯೋಗಕ್ಕೆ ಸುಳ್ಳು ದಾಖಲಾತಿ ನೀಡಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಆರೋಪಿಸಿದ್ದಾರೆ‌.

ನಗರದಲ್ಲಿ‌ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಮತ್ತು ಭವಾನಿ ಇಬ್ಬರೂ ಎರಡು ಕಂಪನಿಗಳಲ್ಲಿ ಪಾಲುದಾರರಾಗಿದ್ದು, ಶೇ. 20 ರಿಂದ 25 ರಷ್ಟು ಪಾಲು ಹೊಂದಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಸಬೇಕಾದರೆ ಈ ಅಂಶವನ್ನು ಮರೆ ಮಾಚಲಾಗಿದೆ ಎಂದು ದೂರಿದರು.

ಈ ಕುರಿತು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಇಂದು ದೂರು ನೀಡಲಾಗಿದ್ದು, ಪರಿಶೀಲಿಸುವುದಾಗಿ ಹಿಂಬರಹ ನೀಡಿದ್ದಾರೆ. ನಮಗೆ ಜಿಲ್ಲಾ ಚುನಾವಣಾ ಅಧಿಕಾರಿಯಿಂದ ನ್ಯಾಯ ಸಿಗದಿದ್ದರೆ ಮುಂದಿನ ಹೋರಾಟ ರೂಪಿಸಲಾಗುವುದು. ಕೇಂದ್ರ ಚುನಾವಣಾ ಆಯೋಗ, ನ್ಯಾಯಾಲಯದಲ್ಲೂ ಈ ವಿರುದ್ಧ ಹೋರಾಟ ನಡೆಸಲಾಗುವುದು. ಚುನಾವಣೆ ಮುಂಚೆಯೇ ಈ ರೀತಿ ಸುಳ್ಳು ದಾಖಲಾತಿ ಸಲ್ಲಿಸುವ ಅಭ್ಯರ್ಥಿಯನ್ನು ಬೆಂಬಲಿಸಬೇಕೇ ಬೇಡವೇ ಎಂಬುದನ್ನು ಜನರು ತೀರ್ಮಾನಿಸುತ್ತಾರೆ. ಚುನಾವಣೆಗೂ ಮೊದಲೇ ಈ ರೀತಿ ತಪ್ಪು ಮಾಹಿತಿ ನೀಡುವವರು ಗೆದ್ದರೆ ಏನೆಲ್ಲಾ ಅನಾಹುತ ಆಗಬಹುದು ಎಂದು ಜನತೆ ಆಲೋಚಿಸಬೇಕು ಎಂದರು.

For All Latest Updates

TAGGED:

ABOUT THE AUTHOR

...view details