ಹಾಸನ :ಇಂದು ಬೆಳ್ಳಂಬೆಳ್ಳಗ್ಗೆ ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧೆಡೆ ದಾಳಿ ನಡೆಸಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಅದರಂತೆ ಜಿಲ್ಲೆಯ ಅರಸೀಕೆರೆ ನಗರದಲ್ಲಿ ಮೂರು ಕಡೆ ಐಟಿ ದಾಳಿ ನಡೆದಿದೆ.
ಬೆಂಗಳೂರಿನಿಂದ ಆರು ವಾಹನಗಳಲ್ಲಿ ಬಂದ ಅಧಿಕಾರಿಗಳ ತಂಡ ಜಿಲ್ಲೆಯ ಅರಸೀಕೆರೆ ನಗರದ ಕೊಬ್ಬರಿ ಮಂಡಿ ವರ್ತಕ ಆರ್ಟಿಎಸ್ ಟ್ರೇಡರ್ಸ್ ರಾಜಣ್ಣ, ಮಹೇಶ್ವರಪ್ಪ ಅಂಡ್ ಕೋ ಕಂಪನಿ ಮಾಲೀಕ ನಿಜಗುಣ ಮತ್ತು ರಾಜಸ್ಥಾನ ಕಮರ್ಷಿಯಲ್ ಕಾರ್ಪೊರೇಷನ್ ಮಾಲೀಕ ನಿತಿನ್ ಎಂಬುವರ ಮನೆ ಹಾಗೂ ಅಂಗಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ ಡಿಪಾರ್ಟ್ಮೆಂಟ್) ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.