ಹಾಸನ:ಜಿಲ್ಲೆಯ ಬೇಲೂರು ಪಟ್ಟಣದ ಪುರಸಭಾ ಆವರಣದಲ್ಲಿ ಪುರಸಭಾ ಕಾರ್ಯಾಲಯ ಹಾಗೂ ಹಾಸನ ನಗರಾಭಿವೃದ್ಧಿ ಕೋಶ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಧಾನ ಮಂತ್ರಿ ಅವಾಸ ಯೋಜನೆ ಅಂಗೀಕಾರ ಆಂದೋಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ನೆಲ-ಜಲ ಕಾಪಾಡುವಲ್ಲಿ ಎಲ್ಲರ ಜವಾಬ್ದಾರಿ ಅಗತ್ಯ: ಶಾಸಕ ಲಿಂಗೇಶ್ - ಹಾಸನ ನಗರಾಭಿವೃದ್ಧಿ ಕೋಶ
ಪ್ರಧಾನ ಮಂತ್ರಿ ಅವಾಸ ಯೋಜನೆ ಅಂಗೀಕಾರ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಹಾಸನ ಶಾಸಕ ಕೆ.ಎಸ್. ಲಿಂಗೇಶ್, ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ನೆಲ-ಜಲ ಕಾಪಾಡುವಲ್ಲಿ ಎಲ್ಲರ ಜವಾಬ್ದಾರಿ ಅಗತ್ಯವಾದದ್ದು ಎಂದರು.
![ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ನೆಲ-ಜಲ ಕಾಪಾಡುವಲ್ಲಿ ಎಲ್ಲರ ಜವಾಬ್ದಾರಿ ಅಗತ್ಯ: ಶಾಸಕ ಲಿಂಗೇಶ್](https://etvbharatimages.akamaized.net/etvbharat/prod-images/768-512-4632701-thumbnail-3x2-megha.jpg)
ಈ ವೇಳೆ ಮಾತನಾಡಿದ ಶಾಸಕ ಕೆ.ಎಸ್. ಲಿಂಗೇಶ್, ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ನೆಲ-ಜಲ ಕಾಪಾಡುವಲ್ಲಿ ಎಲ್ಲರ ಜವಾಬ್ದಾರಿ ಅಗತ್ಯವಾದದ್ದು. ಈಗಾಗಲೇ ಪುರಸಭೆ ವತಿಯಿಂದ 80 ಜನರು ಆಯ್ಕೆಯಾಗಿ ಸಾಮಾನ್ಯ ವರ್ಗದ ಕುಟುಂಬಗಳಿಗೆ 2 ಲಕ್ಷದ 20 ಸಾವಿರ ಹಾಗೂ ಅಂಬೇಡ್ಕರ್ ಯೋಜನೆಯಡಿ 3 ಲಕ್ಷದ 30 ಸಾವಿರ ನೀಡಿ ಮನೆ ಕಟ್ಟಿಕೊಡಲಾಗಿದೆ. ಕೇವಲ ಮನೆ ನಿರ್ಮಾಣ ಮಾತ್ರವಲ್ಲದೆ ಮನೆಗೆ ಬೇಕಾದ ಗ್ಯಾಸ್ ಲೈಟ್ಗಳನ್ನು ಕೂಡ ನೀಡಲಾಗುತ್ತಿದೆ ಎಂದರು.
ಬಳಿಕ ಫಲಾನುಭವಿಗಳಿಗೆ ಕಸ ಸಂಗ್ರಹಣೆಗೆ ಡಸ್ಟ್ ಬಿನ್ ವಿತರಿಸಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಟೇಶ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಮುಖ್ಯಾಧಿಕಾರಿ ಎಸ್ ಎಸ್ ಮಂಜುನಾಥ್, ಯೋಜನಾಧಿಕಾರಿ ಶಶಿಕಲಾ ಹಾಗೂ ಸಿಬ್ಬಂದಿಗಳು ಹಾಜರಿದ್ದರು.