ಕರ್ನಾಟಕ

karnataka

ETV Bharat / state

ಹೊಳೆನರಸೀಪುರದಲ್ಲಿ ಐಟಿ ಖೆಡ್ಡಾಕ್ಕೆ ಬಿದ್ದ ಯುವಕ... 25 ಲಕ್ಷ ರೂ. ವಶಕ್ಕೆ - Detained

ಅಕ್ರಮ ಹಣ ಸಾಗಣೆ ಆರೋಪ- ಹಳ್ಳಿಮೈಸೂರು ಕಡೆಯಿಂದ ಹೊಳೇನರಸೀಪುರ ಕಡೆ ಬರುತ್ತಿದ್ದ ವೇಳೆ ಐಟಿ ಬಲೆಗೆ ಬಿದ್ದ ಯುವಕ- ಬಂಧಿತನಿಂದ 25 ಲಕ್ಷ ರೂ. ನಗದು, ದ್ವಿಚಕ್ರ ವಾಹನ ವಶಕ್ಕೆ

ಯುವಕ

By

Published : Apr 5, 2019, 5:43 PM IST

ಹಾಸನ/ಹೊಳೆನರಸೀಪುರ:ಯುವಕನೋರ್ವ ದ್ವಿಚಕ್ರ ವಾಹನದಲ್ಲಿ 25 ಲಕ್ಷ ರೂ. ಅಕ್ರಮ ಹಣ ಸಾಗಿಸುತ್ತಿದ್ದ ಆರೋಪದ ಮೇಲೆ ಐಟಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಹೊಳೆನರಸೀಪುರದಲ್ಲಿ ನಡೆದಿದೆ.

ಹಾಸನದಲ್ಲಿ ಐಟಿ ಅಧಿಕಾರಿಗಳ ಅತಿಥಿಯಾದ ಯುವಕ

ಐಟಿ ಅಧಿಕಾರಿಗಳು ಯುವಕನಿಂದ ನಗದು ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಹಳ್ಳಿಮೈಸೂರು ಕಡೆಯಿಂದ ಹೊಳೇನರಸೀಪುರ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.

ನಂತರ ಗ್ರಾಮಾಂತರ ಪೊಲೀಸ್‌ ಠಾಣೆಯ ಕಚೇರಿಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ್ದಾರೆ.

ABOUT THE AUTHOR

...view details