ಹಾಸನ: ಬಿ.ಎಂ. ರಸ್ತೆಯ ಡಿವೈಡರ್‌ಗೆ ಅಡ್ಡಲಾಗಿ ಹಾಕಲಾಗಿರುವ ಕಬ್ಬಿಣದ ಗ್ರಿಲ್ ತೆರವು ಮಾಡುವ ಮೂಲಕ ಸಾರ್ವಜನಿಕರು ಓಡಾಡಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯಿಂದ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬಿ.ಎಂ.ರಸ್ತೆಯ ಡಿವೈಡರ್‌ಗೆ ಹಾಕಲಾದ ಗ್ರಿಲ್ ತೆರವುಗೊಳಿಸಲು ಮನವಿ
ಹಾಸನದ ಬಿ.ಎಂ. ರಸ್ತೆಯ ಡಿವೈಡರ್‌ಗೆ ಅಡ್ಡಲಾಗಿ ಹಾಕಲಾಗಿರುವ ಕಬ್ಬಿಣದ ಗ್ರಿಲ್ ತೆರವು ಮಾಡುವ ಮೂಲಕ ಸಾರ್ವಜನಿಕರು ಓಡಾಡಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ.
ಇದುವರೆಗೂ ನಗರದ ಆಜಾದ್ ರಸ್ತೆ ಮತ್ತು ಗುಂಡಿ ರಸ್ತೆ ಮಧ್ಯೆ ಓಡಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈಗ ಬಿ.ಎಂ. ರಸ್ತೆ ಉದ್ದಕ್ಕೂ ಕಬ್ಬಿಣದ ಗ್ರಿಲ್ಸ್ ಹಾಕಿದ್ದಾರೆ. ಇದರ ಮಧ್ಯೆ ಓಡಾಡಲು ಅವಕಾಶ ಕಲ್ಪಿಸಬೇಕು. ಆಜಾದ್ ರಸ್ತೆಯಿಂದ ಮುಖ್ಯ ರಸ್ತೆ ದಾಟಲು ಅಡ್ಡ ರಸ್ತೆ ಶತಮಾನಗಳಿಂದಲೂ ಇದುವರೆಗೂ ತೆರವು ಇತ್ತು. ಆದರೆ ಈಗ ತಮ್ಮ ಇಲಾಖೆಯವರು ಆ ರಸ್ತೆಯನ್ನು ಕಬ್ಬಿಣದ ಗ್ರಿಲ್ ಹಾಕಿ ಮುಚ್ಚಿರುವುದರಿಂದ ಸಾವಿರಾರು ಜನರಿಗೆ ತೊಂದರೆ ಹಾಗೂ ಕಷ್ಟವಾಗಿದೆ ಎಂದರು.
ಇದುವರೆಗೂ ವಾಹನಗಳು, ಸಾರ್ವಜನಿಕರು, ವಿದ್ಯಾರ್ಥಿಗಳು, ಸಾವಿರಾರು ಸಂಖ್ಯೆಯಲ್ಲಿ ಓಡಾಡುತ್ತಿದ್ದಾಗ ಯಾವುದೇ ಅವಘಡಗಳು ಸಂಭವಿಸಿಲ್ಲ. ಈಗ ಅಡ್ಡ ರಸ್ತೆಯನ್ನು ದಾಟಲು ಹಳೆ ಶಾಂತಿ ಸ್ಟೋರ್ ವೃತ್ತದವರೆಗೂ ಸುತ್ತಿ ಬಳಸಿ ಬರಬೇಕಾಗುತ್ತದೆ. ಒನ್ ವೇಯಲ್ಲಿಯೇ ಹೋಗುತ್ತಿರುವುದರಿಂದ ಅಪಘಾತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ ಎಂದರು.