ಹಾಸನ/ಆಲೂರು: ಸಾರ್ವಜನಿಕರಿಗೆ ಸಕಾಲ ಯೋಜನೆ ಬಗ್ಗೆ ಮಾಹಿತಿ ನೀಡಲು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಕಾಲಕ್ಕೆ ಸಂಬಂಧಿಸಿದ ಸೂಚನೆ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ತಾಲೂಕು ತಹಶೀಲ್ದಾರ್ ಶಿರೀನ್ ತಾಜ್ ಹೇಳಿದರು.
ಸರ್ಕಾರಿ ಕಚೇರಿಯಲ್ಲಿ 'ಸಕಾಲ'ಕ್ಕೆ ಸಂಬಂಧಿಸಿದ ಸೂಚನ ಫಲಕ ಕಡ್ಡಾಯ: ತಹಶೀಲ್ದಾರ್ - hassan news
ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಕಾಲಕ್ಕೆ ಸಂಬಂಧಿಸಿದ ಸೂಚನೆ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ತಾಲೂಕು ತಹಶೀಲ್ದಾರ್ ಶಿರೀನ್ ತಾಜ್ ಅವರು ತಾಲೂಕಿನ 36 ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಹೇಳಿದರು.
ತಾಲೂಕು ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸಕಾಲದ ಬಗ್ಗೆ ಮಾಹಿತಿ ನೀಡುವ ಸಲುವಾಗಿ ತಾಲೂಕಿನ 36 ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಕಾಲ ಸೇವೆಗಳಲ್ಲಿ ಲಭ್ಯವಿರುವ ಕಂದಾಯ ಇಲಾಖೆಯ 58 ಸೇವೆಗಳು ಎಲ್ಲಾ ಜನರಿಗೂ ತಲುಪುವಂತೆ ನೋಡಿಕೊಳ್ಳಬೇಕು ಆಯಾ ಕಚೇರಿಯಲ್ಲಿ ಲಭ್ಯವಿರುವ ನಾಗರೀಕ ಸೇವೆಗಳು ಮತ್ತು ಇತರೆ ಸಂಬಂಧಿತ ಸೇವೆಗಳ ಮಾಹಿತಿಯುಳ್ಳ ಸೂಚನಾ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಚ್.ಕೆ.ಸತೀಶ್, ಆರೋಗ್ಯಾಧಿಕಾರಿ ಡಾ.ಹೆಚ್.ಆರ್. ತಿಮ್ಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಹೊನ್ನೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಎ.ಟಿ. ಮಲ್ಲೇಶ್, ಹಾಗೂ ಇಲಾಖೆಯ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.