ಕರ್ನಾಟಕ

karnataka

ಹಾಸನ ಜಿಲ್ಲೆಯಲ್ಲಿ ಕೊರೊನಾ ಹೆಚ್ಚುತ್ತಿದ್ದರೂ ಕ್ಯಾರೇ ಎನ್ನದ ಅರಸೀಕೆರೆ ಜನತೆ

By

Published : May 1, 2021, 9:25 AM IST

ಅರಸೀಕೆರೆ ನಗರದ ಬಿಹೆಚ್ ರಸ್ತೆಯ ಬಹುತೇಕ ಅಂಗಡಿ ಮಳಿಗೆಗಳು ತೆರೆದಿದ್ದು, ಕೆಲವು ಸಾರ್ವಜನಿಕರು ಮಾಸ್ಕ್​ ಧರಿಸದೆ ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಈಗಾಗಲೇ ಪೊಲೀಸ್ ಇಲಾಖೆ ಸಾಕಷ್ಟು ಕ್ರಮ ಕೈಗೊಂಡಿದ್ದರೂ ಜನರು ಮಾತ್ರ ಮೆಡಿಕಲ್ ಎಮರ್ಜೆನ್ಸಿ, ಕೈಗಾರಿಕಾ ವಲಯ ಸೇರಿದಂತೆ ಇನ್ನಿತರ ನೆಪವೊಡ್ಡಿ ರಸ್ತೆಗಿಳಿಯುತ್ತಿದ್ದಾರೆ.

ಕೊರೊನಾ ಹೆಚ್ಚುತ್ತಿದ್ದರು ಕ್ಯಾರೇ ಎನ್ನದ ಅರಸೀಕೆರೆ ಜನತೆ
ಕೊರೊನಾ ಹೆಚ್ಚುತ್ತಿದ್ದರು ಕ್ಯಾರೇ ಎನ್ನದ ಅರಸೀಕೆರೆ ಜನತೆ

ಹಾಸನ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರು ಜನರು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಮಾಸ್ಕ್​ ಹಾಕದೆ, ಸಾಮಾಜಿಕ ಅಂತರ ಕಾಪಡಿಕೊಳ್ಳದೆ ತಮಗಿಷ್ಟ ಬಂದಂತೆ ತಿರುಗಾಡುತ್ತಿದ್ದಾರೆ.

ಅರಸೀಕೆರೆ ನಗರದ ಬಿಹೆಚ್ ರಸ್ತೆಯ ಬಹುತೇಕ ಅಂಗಡಿ ಮಳಿಗೆಗಳು ತೆರೆದಿದ್ದು, ಕೆಲವು ಸಾರ್ವಜನಿಕರು ಮಾಸ್ಕ್​ ಧರಿಸದೆ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈಗಾಗಲೇ ಪೊಲೀಸ್ ಇಲಾಖೆ ಸಾಕಷ್ಟು ಕ್ರಮ ಕೈಗೊಂಡಿದ್ದರೂ ಜನರು ಮಾತ್ರ ಮೆಡಿಕಲ್ ಎಮರ್ಜೆನ್ಸಿ, ಕೈಗಾರಿಕಾ ವಲಯ ಸೇರಿದಂತೆ ಇನ್ನಿತರ ನೆಪವೊಡ್ಡಿ ರಸ್ತೆಗಿಳಿಯುತ್ತಿದ್ದಾರೆ.

ಜಿಲ್ಲೆಯಲ್ಲಿ ನಿನ್ನೆ 660ಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈಗಾಗಲೇ ಜಿಲ್ಲೆಯಲ್ಲಿ ಅನವಾಶ್ಯಕವಾಗಿ ಓಡಾಡುತ್ತಿದ್ದ 400ಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ, ಒಂದು ಲಕ್ಷಕ್ಕೂ ಅಧಿಕ ರೂಪಾಯಿ ದಂಡ ವಿಧಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಪೊಲೀಸರಿಗೆ ಸಹಕರಿಸಬೇಕು. ಜೊತೆಗೆ ಸರ್ಕಾರ ಮತ್ತು ಜಿಲ್ಲಾಡಳಿತ ವಿಧಿಸಿರುವ ನಿಯಮದಂತೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಕೊರೊನಾ ಮುಕ್ತ ಹಾಸನಕ್ಕೆ ಸಹಕರಿಸಬೇಕು ಎಂದು ಎಎಸ್ಪಿ ನಂದಿನಿ ಮನವಿ ಮಾಡಿದ್ದಾರೆ.

ಓದಿ : ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ, ಜಾಗೃತರಾಗಿರಿ.. ಈ ಲಕ್ಷಣಗಳು ಕಂಡುಬಂದ್ರೆ ತಕ್ಷಣ ಎಚ್ಚೆತ್ತುಕೊಳ್ಳಿ

ABOUT THE AUTHOR

...view details