ಕರ್ನಾಟಕ

karnataka

ETV Bharat / state

ಬೆಳೆಯ ಜೊತೆಗೆ ಹೈನುಗಾರಿಕೆಗೆ ಆದ್ಯತೆ ನೀಡಿ: ಶಾಸಕ ಪ್ರೀತಮ್ ಗೌಡ - MLA pretam gouda

ರೈತರು ಕೇವಲ ಬೆಳೆಗಳ ಮೇಲೆ ಆದಾಯ ನಿರೀಕ್ಷಿಸುವ ಬದಲು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಲು ಶಾಸಕ ಪ್ರೀತಮ್ ಜಿ.ಗೌಡ ಸಲಹೆ ನೀಡಿದರು.

MLA pretam gouda
ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಶಾಸಕ ಪ್ರೀತಮ್ ಜೆ. ಗೌಡ ಸಲಹೆ

By

Published : Aug 8, 2020, 4:49 PM IST

ಹಾಸನ: ರೈತರು ವರ್ಷದ ಅಥವಾ ಆರು ತಿಂಗಳ ಬೆಳೆಗಳ ಜೊತೆ ತಿಂಗಳಿಗೆ ಆದಾಯವಾಗುವ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಶಾಸಕ ಪ್ರೀತಮ್ ಜೆ. ಗೌಡ ಸಲಹೆ ನೀಡಿದರು.​

ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಶಾಸಕ ಪ್ರೀತಮ್ ಜೆ. ಗೌಡ ಸಲಹೆ

ನಗರದ ಸಿಲ್ವರ್ ಜ್ಯುಬ್ಲಿ ಪಾರ್ಕ್‌ನ ತೋಟಗಾರಿಕೆ ಇಲಾಖೆ ಆವರಣದಲ್ಲಿ ಡಾ.ಎಂ.ಹೆಚ್.ಮರೀಗೌಡರ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡ ತೋಟಗಾರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅತಿವೃಷ್ಟಿ, ಅನಾವೃಷ್ಟಿಗಳಿಂದ ಬೆಳೆಗಳು ನಾಶವಾಗುತ್ತಿವೆ. ರೈತರ ಬದುಕು ಮೋಜಿನ ಆಟವಾಗಿದೆ. ಆದ್ದರಿಂದ ತೋಟಗಾರಿಕೆ ಇಲಾಖೆಯ ಪ್ರಯೋಜನ ಪಡೆದುಕೊಳ್ಳಬೇಕು. ಇದರಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್ ಮಾತನಾಡಿ, ಮಳೆಯ ತೀವ್ರತೆಯಿಂದ ಆಲೂಗಡ್ಡೆ, ಭತ್ತ ಸೇರಿದಂತೆ ಎಲ್ಲಾ ಬೆಳೆಗಳು ನಾಶವಾಗುತ್ತಿವೆ. ಯಾವುದೇ ಒಂದು ಬೆಳೆಗೆ ಸೀಮಿತವಾಗದೆ ಪರ್ಯಾಯ ಬೆಳೆಯ ಕಡೆ ಗಮನಹರಿಸಿ. ತೋಟಗಾರಿಕ ಇಲಾಖೆಯ ಸಲಹೆ ಪಡೆದು ಆರ್ಥಿಕವಾಗಿ ರೈತರು ಸದೃಢವಾಗಬೇಕು ಎಂದು ಹೇಳಿದರು.

ABOUT THE AUTHOR

...view details