ಕರ್ನಾಟಕ

karnataka

ETV Bharat / state

ಅಂಬೇಡ್ಕರ್​ ಭವನ ಕಾಮಗಾರಿ ಪೂರ್ಣಗೊಳಿಸಿ, ನಿರ್ಲಕ್ಷಿಸಿದರೆ ಪ್ರತಿಭಟನೆ ನಡೆಸಲಾಗುವುದು...ಕಾಂಗ್ರೆಸ್​​​ ಆಕ್ರೋಶ - latest news of congress

ಅರಕಲಗೂಡಿನಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್​ ಭವನ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಶೀಘ್ರವೇ ಪೂರ್ಣಗೊಳಿಸುವಂತೆ ತಾಲೂಕು ಕಾಂಗ್ರೆಸ್​ ಒತ್ತಾಯಿಸಿದೆ.

ambedkar bhavan
ಅಂಬೇಡ್ಕರ್​ ಭವನ ಕಾಮಗಾರಿ ಪೂರ್ಣಗೊಳಿಸಿ

By

Published : Jun 22, 2020, 8:48 PM IST

Updated : Jun 22, 2020, 9:06 PM IST

ಅರಕಲಗೂಡು : ಪಟ್ಟಣದಲ್ಲಿ ಅರ್ಧಕ್ಕೆ ನಿಂತಿರುವ ಅಂಬೇಡ್ಕರ್ ಭವನ ಕೆಲಸವನ್ನು ಶಾಸಕರು ಶೀಘ್ರವೇ ಅನುದಾನ ಬಿಡುಗಡೆಗೊಳಿಸಿ ಪೂರ್ಣಗೊಳಿಸಬೇಕು. ನಿರ್ಲಕ್ಷಿಸಿದರೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಎಚ್ಚರಿಕೆ ನೀಡಿದರು.

ಅಂಬೇಡ್ಕರ್​ ಭವನ ಕಾಮಗಾರಿ ಪೂರ್ಣಗೊಳಿಸಿ, ನಿರ್ಲಕ್ಷಿಸಿದರೆ ಪ್ರತಿಭಟನೆ ನಡೆಸಲಾಗುವುದು...ಕಾಂಗ್ರೆಸ್​​​ ಆಕ್ರೋಶ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಅಂಬೇಡ್ಕರ್ ಭವನ ಸ್ಥಾಪನೆಗೆ 5 ಕೋಟಿ ರೂ. ಮಂಜೂರು ಮಾಡಿ 1.50 ಕೋಟಿ ಹಣ ಬಿಡುಗಡೆ ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಜನರ ವಿರೋಧ ಲೆಕ್ಕಿಸದೆ ಹಳೆಯ ಭವನ ಕೆಡವಿ ಹೊಸದಾಗಿ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಆಗ ಹಳೆಯ ಭವನ ತೆರವುಗೊಳಿಸದಂತೆ ಪ್ರತಿಭಟನೆ ನಡೆಸಿದ ಕೆಲವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಲಾಯಿತು. ಆದರೆ ಕಾಮಗಾರಿ ಮಾತ್ರ ಈವರೆಗೂ ಮುಗಿಯದೆ ಅರ್ಧಕ್ಕೆ ನಿಂತಿದೆ ಎಂದರು.

ತಾಲೂಕು ಕಾಂಗ್ರೆಸ್ ಎಸ್​ಸಿ, ಎಸ್​ಟಿ ಘಟಕದ ಅಧ್ಯಕ್ಷ ಗಣೇಶ್ ವೇಲಾಪುರಿ ಮಾತನಾಡಿ, ಅಂಬೇಡ್ಕರ್ ಭವನ ಕಾಮಗಾರಿ ನಿಲ್ಲುವಲ್ಲಿ ಕಾಣದ ಕೈಗಳ ಕೈವಾಡವಿದೆ, ಆರಂಭದಲ್ಲೇ ಕಾಮಗಾರಿ ಪೂರ್ಣಗೊಳಿಸಿದ್ದರೆ ಬಡ ಜನರು ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುತ್ತಿತ್ತು ಎಂದರು.

Last Updated : Jun 22, 2020, 9:06 PM IST

ABOUT THE AUTHOR

...view details