ಕರ್ನಾಟಕ

karnataka

ETV Bharat / state

ಕಾರಿನಲ್ಲಿ ಸಾಗಿಸ್ತಿದ್ದ ಗಾಂಜಾ ಸೀಜ್, ಆರೋಪಿಗಳು ಪರಾರಿ - Illegally marijuana Shipping

ಪೊಲೀಸರು ವಾಹನ ಅಡ್ಡಗಟ್ಟಿದ ಹಿನ್ನೆಲೆ ಆರೋಪಿಗಳು ಕಾರಿನಿಂದಿಳಿದು ಪರಾರಿಯಾಗಿದ್ದು, ಸದ್ಯಕ್ಕೆ ವಾಹನ ಸಮೇತ 25 ಸಾವಿರ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ..

Marijuana
Marijuana

By

Published : Oct 23, 2020, 5:03 PM IST

ಹಾಸನ: ಅಬಕಾರಿ ಇಲಾಖೆ ಪೊಲೀಸರು ದಾಳಿ ನಡೆಸಿ, ಮಾರುತಿ ಕಾರಿನಲ್ಲಿ ಸಾಗಿಸುತ್ತಿದ್ದ300 ಗ್ರಾಂ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಸನದಿಂದ ಬೇಲೂರು ರಸ್ತೆ ಮಾರ್ಗವಾಗಿ ಮಾರುತಿ ಓಮ್ನಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಕೊಂಡೊಯ್ಯುತ್ತಿದ್ದ ವೇಳೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ.

ಪೊಲೀಸರು ವಾಹನ ಅಡ್ಡಗಟ್ಟಿದ ಹಿನ್ನೆಲೆ ಆರೋಪಿಗಳು ಕಾರಿನಿಂದಿಳಿದು ಪರಾರಿಯಾಗಿದ್ದು, ಸದ್ಯಕ್ಕೆ ವಾಹನ ಸಮೇತ 25 ಸಾವಿರ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details