ಕರ್ನಾಟಕ

karnataka

By

Published : Sep 15, 2020, 11:00 AM IST

ETV Bharat / state

ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಅಕ್ರಮ ಆರೋಪ: ಪ್ರತಿಭಟನೆ

ಕೋಟೆ ಹಿಂದಲಕೊಪ್ಪಲು ಅಂಗನವಾಡಿ ಕಾರ್ಯಕರ್ತೆ ಹುದ್ದೆ ಗಿಟ್ಟಿಸಿಕೊಳ್ಳುಲು ರಮ್ಯಾ ಎಂಬ ಮಹಿಳೆ ವಾಸ ಸ್ಥಳ, ರೇಷನ್ ಕಾರ್ಡ್, ವೋಟರ್ ಐಡಿಯನ್ನು ಬದಲಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

Illegal recruitment of Anganwadi workers
ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಅಕ್ರಮ ಆರೋಪ: ಪ್ರತಿಭಟನೆ

ಅರಕಲಗೂಡು:ಪಟ್ಟಣದ ಸಮೀಪವಿರುವ ಕೋಟೆ ಹಿಂದಲಕೊಪ್ಪಲು ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ವೀಣಾ ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಅಕ್ರಮ ಆರೋಪ: ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಗ್ರಾಮದ ಇಬ್ಬರು ಮಹಿಳೆಯರು ಆನ್​​ಲೈನ್​​ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಅರ್ಜಿ ಸಲ್ಲಿಸಿದ ಗ್ರಾಮದವರನ್ನೇ ಪ್ರಥಮ ಆದ್ಯತೆ ಮೇಲೆ ಆಯ್ಕೆ ಮಾಡುತ್ತೆ.‌‌ ಆದ್ರೆ ಇಲ್ಲೊಬ್ಬ ಮಹಿಳೆ ಕೆಲಸ ಗಿಟ್ಟಿಸಿಕೊಳ್ಳುಲು ವಾಸ ಸ್ಥಳ, ರೇಷನ್ ಕಾರ್ಡ್, ವೋಟರ್ ಐಡಿಯನ್ನು ಬದಲಿಸಿ ಕೆಲಸ ಗಿಟ್ಟಿಸಿಕೊಳ್ಳಲು ಮುಂದಾಗಿರುವ ಆರೋಪ ಕೇಳಿ ಬಂದಿದೆ.

ವೀಣಾ ಎಂಬುವರು ಡಿಸಿ ಕಚೇರಿ ಅಲೆದು ಸುಸ್ತಾಗಿರುವ ಮಹಿಳೆ. ಇವರು ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಟಯ್ಯನ ಕೊಪ್ಪಲು ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಆನ್​ಲೈನಲ್ಲಿ ಅರ್ಜಿ ಹಾಕಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೊದಲು ಅದ್ಯತೆ ಕೊಡುವುದು ಸ್ಥಳೀಯರಿಗೆ ಮಾತ್ರ. ಆದರೆ ಇಲ್ಲಿ ಆ ಕೆಲಸ ಮಾತ್ರ ಆಗಿಲ್ಲ ಎನ್ನಲಾಗಿದೆ. ಹೇಗಾದ್ರು ಮಾಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲೇಬೇಕೆಂದು ರಮ್ಯಾ ಎಂಬ ಮಹಿಳೆ ವಾಸಸ್ಥಳ, ವೋಟರ್ ಐಡಿ ಎಲ್ಲವನ್ನು ಬದಲಾವಣೆ ಮಾಡಿದ್ದಾರೆ ಎಂದು ವೀಣಾ ಆರೋಪಿಸಿದ್ದಾರೆ. ಈ ಹಿಂದೆ ಅರಕಲಗೂಡು ತಹಶೀಲ್ದಾರ್ ಕೂಡ ವಾಸ ಸ್ಥಳ ವಿವರದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಸರ್ ನನಗೆ ನ್ಯಾಯ ಬೇಕು. ನಾನು ಇಲ್ಲೇ ಹುಟ್ಟಿ, ಇಲ್ಲೇ ಬೆಳೆದವಳು. ಮೊದಲು ನನಗೆ ಕೆಲಸ ಕೊಡಬೇಕು. ಆದ್ರೆ ಕೆಲ ಹಿರಿಯ ಅಧಿಕಾರಿಗಳು ಪಕ್ಕದ ಗ್ರಾಮದವರಿಗೆ ಕೆಲಸ ಕೊಡಲು ಮುಂದಾಗಿದ್ದಾರೆ. ಇಷ್ಟಾದರೂ ದಾಖಲೆ ತಿರುಚಿದವರಿಗೆ ಕೆಲಸ ಕೊಡಲು ಮುಂದಾಗಿರುವುದು ಎಷ್ಟು ಸರಿ ಎಂಬುವುದು ವೀಣಾ ಅವರ ಅಳಲಾಗಿದೆ.

ಸುಳ್ಳು ದಾಖಲೆ ನೀಡಿದ್ದು, ಈಗಾಗಲೇ ರಮ್ಯಾ ಅವರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಅದರ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ಈ ಕೆಲಸ ವೀಣಾ ಅವರಿಗೆ ಆಗಬೇಕು. ಆಗಿರುವ ಅನ್ಯಾಯದ ವಿರುದ್ಧ ಹಾಸನದಲ್ಲಿಯೂ ಪ್ರತಿಭಟನೆ ಮಾಡಿದರಾದರೂ ಕೋವಿಡ್-19 ಇರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳದ ಕಾರಣ ಇಂದು ಅರಕಲಗೂಡಿನಲ್ಲಿ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದೇವೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಹೂವಣ್ಣ ತಿಳಿಸಿದರು.

ABOUT THE AUTHOR

...view details