ಕರ್ನಾಟಕ

karnataka

By

Published : May 15, 2021, 10:42 PM IST

ETV Bharat / state

ಅಧಿಕಾರಿಗಳು ಕೆಲಸ ಮಾಡದಿದ್ದರೆ ಬೈಯ್ಯೋ ಅಧಿಕಾರ ನನಗಿದೆ, ನಾನು ಸಿಎಂನೇ ಬಿಡಲ್ಲ: ಶಾಸಕ ಶಿವಲಿಂಗೇಗೌಡ

ನಾನು ಕ್ಷೇತ್ರದ ಧಣಿ. ಇಂದು ನನ್ನ ಜನರ ಪ್ರಾಣ ಉಳಿಸಬೇಕು. ನಾನು ಕ್ಷೇತ್ರದಲ್ಲಿದ್ದುಕೊಂಡು ಅಧಿಕಾರಿಗಳಿಂದ ಕೆಲಸ ಮಾಡಿಸಬೇಕು. ಅವರು ಮಾಡದಿದ್ದರೇ ಅವರನ್ನು ಕೇಳೋ ಅಧಿಕಾರ ನನಗಿದೆ. ನಿನ್ನ ಕೇಳಿ ನಾನು ಆಡಳಿತ ನಡೆಸಬೇಕಿಲ್ಲ. ನನಗೆ ಪಾರ್ಟಿ-ಪಕ್ಷ ಗೊತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಯಾವ ಪಕ್ಷದ ಮಂತ್ರಿಯಾದ್ರೂ ತಪ್ಪು ಮಾಡಿದ್ರೆ ನಾನು ಸುಮ್ಮನಿರಲ್ಲ..

ಶಾಸಕ ಶಿವಲಿಂಗೇಗೌಡ
ಶಾಸಕ ಶಿವಲಿಂಗೇಗೌಡ

ಹಾಸನ : ಜಿಲ್ಲಾ ಮಂತ್ರಿಯಲ್ಲ, ಆರೋಗ್ಯ ಮಂತ್ರಿ ಸೇರಿಸಿ ಮುಖ್ಯಮಂತ್ರಿಗಳ ಮುಂದೆನೇ ಹೇಳುತ್ತೇನೆ. ಲಸಿಕೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು, ನನಗೇನು ಭಯವೇ ? ಮೊದಲಿಗೆ ಇದು ಟಾಸ್ಕ್ ಪೋರ್ಸ್ ಸಭೆ, ಬಂದಿರೋದೆ ತಪ್ಪು.

ಬಂದ ಮೇಲೆ ಸುಮ್ಮನೆ ಕೂರಬೇಕು ಎಂದು ಅರಸೀಕೆರೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎನ್.ಡಿ.ಪ್ರಸಾದ್​ಗೆ ಶಾಸಕ ಶಿವಲಿಂಗೇಗೌಡ ಮಾತಿನ ಚಾಟಿ ಬೀಸಿದರು.

ಕೋವಿಡ್ ಹಿನ್ನೆಲೆ ಅರಸೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಇಂದು ಹೆಚ್ಚುವರಿ 100 ಹಾಸಿಗೆಗಳ ಕಟ್ಟಡವನ್ನು ಉದ್ಘಾಟನೆ ಮಾಡಿ ಬಳಿಕ ವೇದಿಕೆ ಭಾಷಣದಲ್ಲಿ ಅವರು ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷನ ವಿರುದ್ದ ಗುಡುಗಿದ್ರು.

ಏನಿದು ಘಟನೆ :ಅರಸೀಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭಾಗಿಯಾಗಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ, ಹಾಸನ ಬಿಟ್ರೆ ಅರಸೀಕೆರೆಯಲ್ಲಿ ಇಂದು ಹೆಚ್ಚುವರಿ ನೂರು ಹಾಸಿಗೆಯುಳ್ಳ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದು, ಇದ್ರಲ್ಲಿ 70 ಹಾಸಿಗೆಗಳನ್ನು ಕೋವಿಡ್​ಗಾಗಿ ಮೀಸಲಿಟ್ಟಿದ್ದೇವೆ.

ಆದ್ರೆ, ಇಲ್ಲಿನ ಓರ್ವ ವೈದ್ಯ ಬಿಟ್ರೆ ಮತ್ಯಾರು ವೈದ್ಯರಾಗಲೀ, ದಾದಿಯರಾಗಲೀ ಪಿಪಿಇ ಕಿಟ್ ಹಾಕಿಕೊಂಡು ಕೋವಿಡ್ ರೂಮ್​ಗೆ ಹೋಗಲ್ಲ. ಇದನ್ನು ನಾನು ಕಂಡುಹಿಡಿದಿದ್ದೇನೆ. ಸರ್ಕಾರದ ಸಂಬಳ ಬೇಕು ನಿಮಗೆ.

ಆದ್ರೆ, ಕೋವಿಡ್ ಕಿಟ್ ಹಾಕಿಕೊಂಡು ರೋಗಿಗಳ ಬಳಿ ಹೋಗೋದಿಕ್ಕಾಗಲ್ವಾ ಎಂದು ಆಸ್ಪತ್ರೆಯ ಇಎನ್​ಟಿ ಅಧಿಕಾರಿ ಕರಿಯಪ್ಪನ ವಿರುದ್ದ ಕೆಂಡಾಮಂಡಲವಾಗಿ ಸಚಿವರ ಎದುರೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ್ರು.

ಹಾಸನ ಟಾಸ್ಕ್ ಪೋರ್ಸ್ ಸಭೆ

ಅಧಿಕಾರಿಯಷ್ಟೆಯಲ್ಲ ತಪ್ಪು ಮಾಡಿದ್ರೆ ಮುಖ್ಯಮಂತ್ರಿನೂ ಪ್ರಶ್ನೆ ಮಾಡೋ ಅಧಿಕಾರವಿದೆ ಸುಮ್ನೆ ಕೂತ್ಕೋ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಎನ್.ಡಿ.ಪ್ರಸಾದ್, ಸಭೆಯಲ್ಲಿ ಅಧಿಕಾರಿಗಳನ್ನು ಬೈಯ್ಯುವುದು ಅವರ ಆತ್ಮಸ್ಥೈರ್ಯ ಕುಗ್ಗಿಸಿದಂತಾಗುತ್ತದೆ.

ಸರ್ಕಾರವನ್ನ ಮುಂದೆ ಹೊಗಳುತ್ತೀರಿ. ಪತ್ರಿಕಾಗೋಷ್ಠಿಯಲ್ಲಿ ಸರ್ಕಾರವನ್ನು ನಿಂದನೆ ಮಾಡುತ್ತೀರಿ. ಏನು ಅಂತ ಮಾತನಾಡ್ತಿರೀ ಎಂದು ಏರುಧ್ವನಿಯಲ್ಲಿ ಮಾತನಾಡಿದ್ರು.

ಇದಕ್ಕೆ ಪ್ರತ್ಯುತ್ತರ ನೀಡಿದ ಶಾಸಕ, ನಾನು ಕ್ಷೇತ್ರದ ಧಣಿ. ಇಂದು ನನ್ನ ಜನರ ಪ್ರಾಣ ಉಳಿಸಬೇಕು. ನಾನು ಕ್ಷೇತ್ರದಲ್ಲಿದ್ದುಕೊಂಡು ಅಧಿಕಾರಿಗಳಿಂದ ಕೆಲಸ ಮಾಡಿಸಬೇಕು. ಅವರು ಮಾಡದಿದ್ದರೇ ಅವರನ್ನು ಕೇಳೋ ಅಧಿಕಾರ ನನಗಿದೆ.

ನಿನ್ನ ಕೇಳಿ ನಾನು ಆಡಳಿತ ನಡೆಸಬೇಕಿಲ್ಲ. ನನಗೆ ಪಾರ್ಟಿ-ಪಕ್ಷ ಗೊತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಯಾವ ಪಕ್ಷದ ಮಂತ್ರಿಯಾದ್ರೂ ತಪ್ಪು ಮಾಡಿದ್ರೆ ನಾನು ಸುಮ್ಮನಿರಲ್ಲ ಎಂದು ಕಿಡಿಕಾರಿದರು.

ಗದ್ದಲ ಗಲಾಟೆಯ ನಡುವೆಯೇ ಮುಗಿದ ಟಾಸ್ಕ್ ಪೋರ್ಸ್ ಸಭೆ :
ಇಷ್ಟೆಯಲ್ಲ ಗಲಾಟೆ ಗದ್ದಲವಾದ್ರು ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಗೋಪಾಲಯ್ಯ ನನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಕುಳಿತಿದ್ರು. ಬಳಿಕ ಕಾರ್ಯಕರ್ತರು ಶಾಸಕನ ಮಾತಿಗೆ ವಿರೋಧ ವ್ಯಕ್ತಪಡಿಸಿದ ಸಭೆಯಲ್ಲಿ ಮತ್ತಷ್ಟು ಗದ್ದಲ ಎಬ್ಬಿಸಿದ್ರು.

ಇದ್ರಿಂದ ಕೆಂಡಾ ಮಂಡಲವಾದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕೆಲ ಕಾಲ ವಾಕ್ಸಮರ ನಡೆಯಿತು. ಬಳಿಕ ಪರಿಸ್ಥಿತಿಯನ್ನು ಶಾಂತಗೊಳಿಸಲು ಪೊಲೀಸ್ರು ಮದ್ಯಸ್ಥಿಕೆ ವಹಿಸಿದ್ರೂ ತಿಳಿಗೊಳ್ಳಲಿಲ್ಲ.

ಬಳಿಕ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ವಿಧಾನ ಪರಿಷತ್ ಶಾಸಕ ಎಂ.ಎ.ಗೋಪಾಲಸ್ವಾಮಿ ಮಧ್ಯ ಪ್ರವೇಶಿಸಿದ ಬಳಿಕ ಕಾರ್ಯಕರ್ತರು ಸುಮ್ಮನಾದ್ರು.

ABOUT THE AUTHOR

...view details