ಹಾಸನ:ನನಗೆ ಅಧಿಕಾರದ ಆಸೆ ಇದ್ದಿದ್ರೆ ಇಷ್ಟೊತ್ತಿಗೆ ಬಿಜೆಪಿ ಸೇರುತ್ತಿದ್ದೆ. ನನಗೆ ಗೂಟದ ಕಾರು ಮಂತ್ರಿಸ್ಥಾನ ಬೇಕಿಲ್ಲ. ನಿಮ್ಮ ವಿರೋಧದ ನಡುವೆ ನಾನು ಪಕ್ಷ ಬದಲಾಯಿಸುವುದಿಲ್ಲ ಎನ್ನುವ ಮೂಲಕ ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ.ಟಿ ರಾಮಸ್ವಾಮಿ ತಮ್ಮ ಕ್ಷೇತ್ರದ ಮತದಾರರಿಗೆ ಗರಂ ಆಗಿ ಉತ್ತರಕೊಟ್ಟರು.
ಚೇಡಿಸಿದ ಮತದಾರರು... ಅಧಿಕಾರದ ಆಸೆ ಇದ್ದಿದ್ದರೆ ಬಿಜೆಪಿಯಲ್ಲಿ ಮಂತ್ರಿಯಾಗುತ್ತಿದೆ ಎಂದ ಜೆಡಿಎಸ್ ಶಾಸಕ - ಕ್ಷೇತ್ರದ ಮತದಾರರಿಗೆ ಗರಂ ಆಗಿ ಉತ್ತರ
ನನಗೆ ಅಧಿಕಾರದ ಆಸೆ ಇದ್ದಿದ್ರೆ ಇಷ್ಟೊತ್ತಿಗೆ ಬಿಜೆಪಿ ಸೇರುತ್ತಿದ್ದೆ. ನನಗೆ ಗೂಟದ ಕಾರು ಮಂತ್ರಿಸ್ಥಾನ ಬೇಕಿಲ್ಲ. ನಿಮ್ಮ ವಿರೋಧದ ನಡುವೆ ನಾನು ಪಕ್ಷ ಬದಲಾಯಿಸುವುದಿಲ್ಲ ಎನ್ನುವ ಮೂಲಕ, ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ.ಟಿ ರಾಮಸ್ವಾಮಿ ತಮ್ಮ ಕ್ಷೇತ್ರದ ಮತದಾರರಿಗೆ ಗರಂ ಆಗಿ ಉತ್ತರಕೊಟ್ಟರು.
ತಮ್ಮ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಲು ಬಂದ ವೇಳೆ ಅಲ್ಲಿನ ಮತದಾರರು ಒಬ್ಬರು ಛೇಡಿಸಿರು. ಇಷ್ಟು ದಿನ ಚುನಾವಣೆಯಲ್ಲಿ ಬಂದವರು ಈಗ ಬರುತ್ತಿದ್ದಾರಲ್ಲಾ, ಸ್ವಾಮಿ ಕೋವಿಡ್ ನಡುವೆ ನಮ್ಮನ್ನು ಮರೆತುಬಿಟ್ರಾ ಎಂದು ಹಿಯಾಳಿಸಿದ್ದಾರೆ. ಇದಕ್ಕೆ ಕೋಪಗೊಂಡ ಶಾಸಕ ಮಾತನಾಡಬೇಕಾದರೆ ಯೋಚಿಸಿ ಮಾತನಾಡಬೇಕು ಹಗಲಿರುಳು ನಿಮಗಾಗಿ ನಾನು ಕಷ್ಟ ಪಡುತ್ತಿದ್ದೇನೆ. ಹೇಮಾವತಿ ಜಲಾಶಯದಿಂದ ನೀರು ಬಿಡದ ಸಂದರ್ಭದಲ್ಲಿ ಕಚೇರಿ ಎದುರು ಪ್ರತಿಭಟನೆ ಮಾಡಿ ಸೊಳ್ಳೆ ಕೈಯಲ್ಲಿ ಕಚ್ಚಿಸಿಕೊಂಡು. ಬಲದಂಡೆ ನಾಲೆಗೆ ನೀರು ಹರಿಸುವ ಕೆಲಸ ಮಾಡಿದ್ದೇನೆ. ಅಧಿಕಾರ ಮಾಡಬೇಕೆನ್ನುವ ಆಸೆ ಇದ್ದರೆ ನಾನು ಇವತ್ತು ಮಂತ್ರಿಯಾಗುತ್ತಿದೆ. ಯಾವತ್ತೋ ನನ್ನ ಯಡಿಯೂರಪ್ಪನವರು ಫೋನ್ ಮಾಡಿ ಬನ್ನಿ ನಮ್ಮ ಪಕ್ಷಕ್ಕೆ ನಿಮ್ಮನ್ನ ಚೇರ್ಮನ್ ಮಾಡ್ತೀನಿ ಎಂದರು. ಅವೆಲ್ಲವನ್ನೂ ಬಿಟ್ಟು ನಿಮಗಾಗಿ ನಾನು ಪಕ್ಷದಲ್ಲಿ ಉಳಿದಿದ್ದೇನೆ ಎಂದು ಅಂದಿನ ಮಾತನ್ನು ಬಹಿರಂಗಪಡಿಸಿದರು.
ಕೋವಿಡ್ -19 ಸಂದರ್ಭದಲ್ಲಿಯೂ ನಾನು ಕ್ಷೇತ್ರದ ಅಭಿವೃದ್ಧಿಯತ್ತ ಚಿಂತನೆ ಮಾಡುತ್ತಿದ್ದೇನೆ. ಕೆಲವು ಜನಪ್ರತಿನಿಧಿಗಳು ಇಂತಹ ಸಂದರ್ಭದಲ್ಲಿ ತಮ್ಮ ಮನೆಯಿಂದ ಹೊರಬರಲು ಹಿಂದು-ಮುಂದು ನೋಡುತ್ತಾರೆ. ಅಂತದ್ದರಲ್ಲಿ ನಾನು ನಿಮ್ಮ ಗ್ರಾಮದ ರಸ್ತೆ ಅಭಿವೃದ್ಧಿಗೆ 30 ಲಕ್ಷ ರೂ. ವಿಶೇಷ ಅನುದಾನ ತರುವ ಮೂಲಕ ರಸ್ತೆ ಮಾಡುತ್ತಿದ್ದೇನೆ. ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು ಎಂದು ಮತದಾರರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.