ಹಾಸನ: ಬರದ ನಾಡಿನ ಭಗಿರಥ ಅಂತ ಇಡೀ ರಾಜ್ಯವೇ ನನ್ನನ್ನು ಕೊಂಡಾಡುತ್ತಿರುವಾಗ, ನಮ್ಮ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ಇದೆ ಅಂತ ಸುಳ್ಳು ಹೇಳುತ್ತಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ವಿರುದ್ಧ ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡುವುದಕ್ಕೆ ಈ ರೀತಿ ಹೇಳಿಕೆ ನೀಡೋದು ನಾಚಿಕೆಗೇಡಿನ ಸಂಗತಿ. ಅರಸೀಕೆರೆ ನಗರಸಭೆಯಲ್ಲಿ ಕೋರಂ ಸಮಸ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ನಿಮ್ಮ ಬೆಂಬಲ ಬೇಕು ಅಂತ ನಮ್ಮನ್ನು ಕರೆಸಿಕೊಂಡು ನಂತರ ಪಕ್ಷಕ್ಕೆ ರಾಜೀನಾಮೆ ಕೊಡಿ ಎಂದರು. ಹಾಗಾಗಿ ಇದಕ್ಕೆ ಒಪ್ಪದೇ ನಾನು ವಾಪಸ್ ಮಾತೃಪಕ್ಷಕ್ಕೆ ಬಂದಿದ್ದೇನೆ ಅಂತ ಕ್ಷಮೆಯಾಚಿಸಿದ್ದಾರೆ.