ಹಾಸನ:ದೇಶದ ಸ್ವಾತಂತ್ರ್ಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಹೋರಾಟ ನಡೆಸಿ ಸಾವರ್ಕರ್ ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದರು.
ದೇಶಕ್ಕೆ ಸಾವರ್ಕರ್ ಕೊಡುಗೆಯೂ ಇದೆ: ಹೆಚ್.ವಿಶ್ವನಾಥ್ - ಹಾಸನದಲ್ಲಿ ಹಾಸನಾಂಬೆ ಹೆಚ್ ವಿಶ್ವನಾಥ್ ಹಾಸನಾಂಬೆ ದರ್ಶನ
ಉಪ ಚುನಾವಣೆ ವೇಳೆ ಜನರ ಬಳಿ ದಯಮಾಡಿ ಮತ ನೀಡಿ ಎಂದು ಕೇಳುತ್ತೇನೆ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ರು.
ಹೆಚ್ ವಿಶ್ವನಾಥ್ ಹೇಳಿಕೆ
ಶನಿವಾರ ರಾತ್ರಿ ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಾವರ್ಕರ್ ಅವರ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಬೇಕು. ದೇಶದ ಸ್ವಾತಂತ್ಯಕ್ಕಾಗಿ ಸಾಕಷ್ಟು ತ್ಯಾಗ, ಹೋರಾಟಗಳನ್ನು ಮಾಡಿದ್ದಾರೆ. ಹಾಗಾಗಿ ನಾವು ಅವರ ಸ್ಮಾರಣೆ ಮಾಡಬೇಕು ಎಂದರು.
ಉಪ ಚುನಾವಣೆ ಹತ್ತಿರ ಬರುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಸನಾಂಬೆ ದಯೆ ಮೇಲೆ ಜನರ ಬಳಿ ದಯಮಾಡಿ ಮತ ನೀಡಿ ಎಂದು ಕೇಳುತ್ತೇನೆ ಎಂದು ಹೇಳಿದ್ರು.