ಕರ್ನಾಟಕ

karnataka

ETV Bharat / state

ಮುಂದಿನ ಎಲೆಕ್ಷನ್​​ನಲ್ಲಿ ಹೊಳೆನರಸೀಪುರದಿಂದ ನಾನೇ ಬಿಜೆಪಿ ಅಭ್ಯರ್ಥಿ: ದೇವರಾಜೇಗೌಡ - \ವಕೀಲರಾದ ದೇವರಾಜೇಗೌಡ ಹೇಳಿಕೆ

ಹೊಳೆನರಸೀಪುರ ಕ್ಷೇತ್ರದ ಶಾಸಕನಾಗಲು ರೇವಣ್ಣ ಅರ್ಹರಲ್ಲ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ ಎಂದು ವಕೀಲ ದೇವರಾಜೇಗೌಡ ಹೇಳಿದ್ದಾರೆ.

Devarajegouda
ದೇವರಾಜೇಗೌಡ ಸುದ್ದಿಗೋಷ್ಠಿ

By

Published : Dec 31, 2019, 5:22 PM IST

ಹಾಸನ:ಮುಂದಿನ ವಿಧಾನಸಭಾ ಕ್ಷೇತ್ರದಲ್ಲಿ ಹೊಳೆನರಸೀಪುರದಿಂದ ಬಿಜೆಪಿ‌ ಅಭ್ಯರ್ಥಿ ನಾನೇ ಎಂದು ವಕೀಲ ದೇವರಾಜೇಗೌಡ ಘೋಷಿಸಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರೇವಣ್ಣ ಹೊಳೆನರಸೀಪುರ ಕ್ಷೇತ್ರದ ಶಾಸಕರಾಗಲು‌ ಅರ್ಹರಲ್ಲ. ಈ ಹಿಂದಿನಂತೆ ಸರ್ವಾಧಿಕಾರಿ‌ ಧೋರಣೆ ಮೂಲಕ ಮನಸ್ಸೋ‌ ಇಚ್ಚೆ ಅನುದಾನಗಳನ್ನು ದುರಪಯೋಗ ಮಾಡಲು ನಾನು‌ ಅವಕಾಶ ನೀಡುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಬಿಜೆಪಿ ಪಕ್ಷದಿಂದ ಈ ಕ್ಷೇತ್ರದಿಂದ ಸ್ಪರ್ಧಿಸಿ‌ ಅವರ ಅಕ್ರಮಗಳ ವಿರುದ್ಧ ಹೋರಾಟ ನಡೆಸುತ್ತೇನೆ ಎಂದರು.

ದೇವರಾಜೇಗೌಡ ಸುದ್ದಿಗೋಷ್ಠಿ

ರೇವಣ್ಣ ನನ್ನ ಮೇಲೆ ಇಲ್ಲ ಸಲ್ಲದ ಕೇಸ್​ಗಳನ್ನ ದಾಖಲು ಮಾಡಿಸುತ್ತಿದ್ದಾರೆ. ಅದಕ್ಕೆಲ್ಲಾ ನಾನು ಹೆದರುವವನಲ್ಲ. ಅವರ ವಂಶದ ವಿರುದ್ಧ ನಾನು ಈಗಾಗಲೇ ಹೋರಾಟ ಪ್ರಾರಂಭಿಸಿದ್ದೇನೆ. ಅವರ ಮಕ್ಕಳ‌ ವಿರುದ್ದ ಈಗಾಗಲೇ ಎಫ್‌ಐಆರ್ ಪರ್ವ ಪ್ರಾರಂಭ ಮಾಡಿದ್ದೇವೆ ಎಂದು ಕಿಡಿಕಾರಿದರು.

ಶಾಸಕ ಹೆಚ್.ಡಿ.ರೇವಣ್ಣ, ಪುರಸಭೆ ಸದಸ್ಯರನ್ನು ಬಳಸಿಕೊಂಡು ಕೊಳೆಗೇರಿ ಅಭಿವೃದ್ಧಿ ಹೆಸರಲ್ಲಿ ಕೋಟ್ಯಂತರ ರೂ ಹಣ ಲೂಟಿ ಹೊಡೆಯಲು‌ ಹಾಸನ‌‌ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅದಲ್ಲದೆ ಜಿಲ್ಲಾಧಿಕಾರಿಗಳಿಗೆ ಬ್ಲಾಕ್ ಮೇಲ್ ಮಾಡುವ ಮೂಲಕ ಅವರಿಂದ ಕೊಳಚೆ ಪ್ರದೇಶವೆಂದು ಘೋಷಣೆ ಮಾಡಿಸಿ, ಕೊಳಚೆ ನಿರ್ಮೂಲನ ಮಂಡಳಿಯಿಂದ ಹಣ ಲಪಟಾಯಿಸಲು ಹುನ್ನಾರ ನಡೆಸಿದ್ದಾರೆಂದು ಆರೋಪಿಸಿದರು.

ABOUT THE AUTHOR

...view details