ಕರ್ನಾಟಕ

karnataka

ETV Bharat / state

ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ; ಆಕೆಯ ಪ್ರಾಣ ಹೋಯಿತೆಂದು ತಿಳಿದು ಆತ್ಮಹತ್ಯೆ ಮಾಡಿಕೊಂಡ - ಪತಿಯಿಂದ ಮಾರಣಾಂತಿಕ ಹಲ್ಲೆ

ಪತ್ನಿಯ ಕೊಲೆ ಮಾಡಲು ಯತ್ನಿಸಿ, ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಪತ್ನಿ ಬದುಕಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

headband-suicide-after-assaulting-on-his-wife-at-hassan
ಹಾಸನ: ಪತ್ನಿಯ ಕೊಲೆಗೆ ಯತ್ನ, ಸತ್ತಳೆಂದು ತಿಳಿದು ಗಂಡ ಆತ್ಮಹತ್ಯೆ!

By ETV Bharat Karnataka Team

Published : Jan 10, 2024, 7:35 AM IST

ಹಾಸನ:ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯು ಪತ್ನಿಯ ಕೊಲೆಗೆ ಯತ್ನಿಸಿದ್ದಾನೆ. ಆಕೆ ಆಕೆಯ ಪ್ರಾಣ ಹೋಯಿತು ಎಂದು ತಿಳಿದ ಗಂಡ ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಹೊಳೆನರಸೀಪುರದ ಬಿಟ್ಟಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಕರಣದಲ್ಲಿ ಅದೃಷ್ಟವಶಾತ್ ಹೆಂಡತಿ ಬದುಕಿದ್ದು, ಗಂಡ ಸಾವನ್ನಪ್ಪಿದ್ದಾನೆ. ಪ್ರಶಾಂತ್ (32) ಮೃತಪಟ್ಟ ವ್ಯಕ್ತಿ. ಬಿಂದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಪತ್ನಿ.

ಘಟನೆ ವಿವರ:'ಕೌಟುಂಬಿಕ ಕಲಹದಿಂದ ಬಿಂದು ಪತಿಯಿಂದ ದೂರವಾಗಿ ತನ್ನ ತವರು ಮನೆ ಸೇರಿದ್ದಳು. ಇದರಿಂದ ಕೋಪಗೊಂಡಿದ್ದ ಪ್ರಶಾಂತ್, ಹಲವು ಬಾರಿ ಮನೆಗೆ ಬರುವಂತೆ ಮನವಿ ಮಾಡಿದ್ದ. ಆದ್ರೆ ಆಕೆ ನಾಗಮಂಗಲದಲ್ಲಿರುವ ಗಂಡನ ಮನೆಗೆ ಹೋಗಿರಲಿಲ್ಲ. ಇದರಿಂದ ಬೇಸತ್ತ ಪ್ರಶಾಂತ್ ಹಾಸನ ಜಿಲ್ಲೆಯ ಹೊಳೆನರಸೀಪುರದ ಬಿಟ್ಟಗೊಂಡನಹಳ್ಳಿಯ ಪತ್ನಿ ಬಿಂದು ಮನೆಗೆ ಬಂದು ಕೋಪದಲ್ಲಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾನೆ. ಬಳಿಕ ಬಿಂದು ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಮಾರಕಾಸ್ತ್ರದಿಂದ ಗಾಯಗೊಳಿಸಿದ್ದಾನೆ' ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಯಿಂದ ಪತ್ನಿ ಮೃತಪಟ್ಟಳೆಂದು ಭಾವಿಸಿ ಪತಿ ಬಳಿಕ ಅದೇ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಗಂಭೀರ ಗಾಯಗೊಂಡ ಬಿಂದು ಬದುಕುಳಿದಿದ್ದಾಳೆ. ಸದ್ಯ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗೌರಿಕೊಪ್ಪಲು ಗ್ರಾಮದ ನಿವಾಸಿ ಪ್ರಶಾಂತ್, 2 ವರ್ಷಗಳ ಹಿಂದೆ ಬಿಂದು ಜೊತೆ ವಿವಾಹವಾಗಿದ್ದ. ಬಳಿಕ ಕೌಟುಂಬಿಕ ಕಲಹದಿಂದಾಗಿ ಬಿಂದು ತವರು ಮನೆ ಸೇರಿದ್ದಳು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊಳೆನರಸೀಪುರ ನಗರ ಪೊಲೀಸರು ಆಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಆಸ್ತಿ ಹಂಚಿಕೆ ವಿಚಾರ: ಮಗನಿಂದಲೇ ಹೆತ್ತವರ ಕೊಲೆ ಶಂಕೆ

ABOUT THE AUTHOR

...view details