ಕರ್ನಾಟಕ

karnataka

ETV Bharat / state

ಗಂಡನ ಕೊಲೆ ಮಾಡಿಸಿ ಹಸು ತುಳಿದು ಮೃತಪಟ್ಟನೆಂದು ಕಥೆ ಕಟ್ಟಿದ ಪತ್ನಿ! - Husband murder

ಹೆಂಡತಿಯೇ ಗಂಡನನ್ನು ಕೊಲೆ ಮಾಡಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.

Husband murder by his wife
ಪತ್ನಿಯಿಂದಲೇ ಗಂಡನ ಕೊಲೆ

By

Published : Dec 5, 2022, 5:10 PM IST

ಹಾಸನ:ಜಿಲ್ಲೆಯ ಅರಸೀಕೆರೆ ತಾಲೂಕಿನ ಯಡವನಹಳ್ಳಿ ಗ್ರಾಮದ ಶಿವಗಂಗಮ್ಮ ಎಂಬ ಮಹಿಳೆ ಅಕ್ರಮ ಸಂಬಂಧಕ್ಕಾಗಿ ತನ್ನ ಗಂಡನನ್ನೇ ಕೊಲೆಗೈದಿರುವ ಘಟನೆ ನಡೆದಿದೆ. ಆ ಬಳಿಕ, ತನ್ನ ಗಂಡ ಮನೆಯಲ್ಲಿದ್ದ ಸಿಂಧಿ ಹಸುವಿನ ಕಾಲ್ತುಳಿತಕ್ಕೆ ಸಿಲುಕಿ ಸಾವಿಗೀಡಾದ ಅಂತ ಊರೆಲ್ಲ ಗುಲ್ ಹಬ್ಬಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆಕೆ ಮತ್ತೊಬ್ಬ ವ್ಯಕ್ತಿಯ ಜೊತೆ ಸಂಬಂಧದಲ್ಲಿದ್ದ ವಿಚಾರ ತಿಳಿದು ಬಂಧಿಸಿದ್ದಾರೆ.

ರವೀಶ್ ಕೊಲೆಯಾದ ದುರ್ದೈವಿ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಾಗ ಸತ್ಯ ಬಯಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹಸು ತುಳಿದಿರುವ ಯಾವುದೇ ಕುರುಹು ಕಂಡುಬಂದಿಲ್ಲ. ಇದೊಂದು ಕೊಲೆ ಎಂದೇ ತಿಳಿದು ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿದೆ.

ರೈತ ಸಂಘದ ಮುಖಂಡ ದಯಾನಂದ್ ಮತ್ತು ಶಿವಗಂಗಮ್ಮಳ ಸಂಬಂಧವೇನು ಎನ್ನುವುದು ತಿಳಿದಿಲ್ಲ. ಸಿಂಧಿ ಹಸು ತುಳಿದು ಸಾಯಿಸಿದೆ ಎಂದು ಬಿಂಬಿಸುವಂತೆ ಶಿವಗಂಗಮ್ಮಳಿಗೆ ದಯಾನಂದ್ ಹೇಳಿಕೊಟ್ಟಿದ್ದನಂತೆ. ಈ ಪ್ರಕರಣದಲ್ಲಿ ಗುರುಪ್ರಸಾದ್ ಎಂಬ ಇನ್ನೊಬ್ಬ ವ್ಯಕ್ತಿಯಿದ್ದಾನೆ. ಈಗ ಅರಸೀಕೆರೆ ಗ್ರಾಮಾಂತರ ಪೊಲೀಸರು ಮೂವರನ್ನು ಬಂಧಿಸಿದ್ದು ತನಿಖೆ ಮುಂದುವರೆದಿದೆ.

ಇದನ್ನೂ ಓದಿ:ದಬ್ಬಾಳಿಕೆಗೆ ಬೇಸತ್ತು ಕೊಲೆ.. ವ್ಯಕ್ತಿ ಹತ್ಯೆಗೈದು ಶವ ರಾಜಕಾಲುವೆಗೆ ಎಸೆದ ಐವರ ಬಂಧನ

ABOUT THE AUTHOR

...view details