ಚನ್ನರಾಯಪಟ್ಟಣ: ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿರುವ ಪ್ರಕರಣ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪತ್ನಿ ಮೇಲೆ ಅನುಮಾನ: ಕೊಚ್ಚಿ ಕೊಂದು ಪತಿ ಪರಾರಿ - ಪತಿಯಿಂದಲೇ ಪತ್ನಿ ಹತ್ಯೆ ಸುದ್ದಿ
ಅನುಮಾನ ಹಿನ್ನೆಲೆ ಪತ್ನಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪತಿ ಎಸ್ಕೇಪ್ ಆಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.
25 ವರ್ಷದ ಪೂಜಾ ಕೊಲೆಯಾದ ಮಹಿಳೆ. ಪತಿ ಗಂಗಾಧರ್ ತಡರಾತ್ರಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿ ಪತಿ ಗಂಗಾಧರ್ ಹೆಂಡತಿಯ ಮೇಲೆ ಅನುಮಾನ ಪಡುತ್ತಿದ್ದ. ಹೀಗಾಗಿ ಅವರ ನಡುವೆ ಆಗಾಗ ಜಗಳ ನಡೆದು, ರಾಜಿ ಪಂಚಾಯ್ತಿ ಕೂಡ ಮಾಡಲಾಗಿತ್ತು. ಮತ್ತೆ ತಡರಾತ್ರಿ ಗಂಡ, ಹೆಂಡತಿ ನಡುವೆ ಗಲಾಟೆಯಾಗಿದೆ. ಈ ವೇಳೆ ಕೋಪಗೊಂಡ ಗಂಡ, ಹೆಂಡತಿಯನ್ನು ಕೊಚ್ಚಿ ಕೊಂದು ಪರಾರಿಯಾಗಿದ್ದಾನೆ.
ಇನ್ನು ಈ ವಿಷಯ ಕೇಳಿ ಬೇರೆ ಮನೆಯಲ್ಲಿ ವಾಸವಿದ್ದ ಗಂಗಾಧರ್ ತಾಯಿ ವಿಷ ಸೇವಿಸಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.