ಹಾಸನ:ನಗರದ ತಣ್ಣಿರು ಹಳ್ಳ, ಹಾಲುವಾಗಿಲು ರಸ್ತೆಯಲ್ಲಿರುವ ಐಶ್ವರ್ಯ ಎಜುಕೇಶನ್ ಟ್ರಸ್ಟ್ ಅವರ ಹೊಯ್ಸಳ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಕ್ಕಳ ಸಂತೆಯೂ ನಡೆದು ಗಮನಸೆಳೆಯಿತು.
ಗಮನ ಸೆಳೆದ ಹೊಯ್ಸಳ ಶಿಕ್ಷಣ ಸಂಸ್ಥೆಯ ಚಿಣ್ಣರ ಸಂತೆ - ಹಾಸನ ಮಕ್ಕಳ ಸಂತೆ ಕಾರ್ಯಕ್ರಮ
ಪಠ್ಯವನ್ನು ಮಾತ್ರ ಕಲಿಸದೇ ಪಠ್ಯೇತರ ಕಡೆಯು ಗಮನಕೊಡುವ ನಿಟ್ಟಿನಲ್ಲಿ ಮಕ್ಕಳಿಂದಲೇ ವ್ಯಾಪಾರ ಮಾಡಿಸುವುದರ ಮೂಲಕ ವ್ಯವಹಾರದ ಪ್ರಜ್ಞೆ ಬೆಳೆಸಲು ಐಶ್ವರ್ಯ ಎಜುಕೇಶನ್ ಟ್ರಸ್ಟ್ ಅವರ ಹೊಯ್ಸಳ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಸಂತೆ ಆಯೋಜಿಸಲಾಗಿತ್ತು.

ಗಮನ ಸೇಳೆದ ಹೊಯ್ಸಳ ಶಿಕ್ಷಣ ಸಂಸ್ಥೆಯ ಚಿಣ್ಣರ ಸಂತೆ
ಗಮನ ಸೆಳೆದ ಹೊಯ್ಸಳ ಶಿಕ್ಷಣ ಸಂಸ್ಥೆಯ ಚಿಣ್ಣರ ಸಂತೆ
ಶಾಲೆಯಲ್ಲಿ ಹೇಳಿಕೊಡುವ ಪಠ್ಯವನ್ನು ಮಾತ್ರ ಕಲಿಸದೇ ಪಠ್ಯೇತರ ವಿಷಯಗಳ ಕಡೆಯೂ ಗಮನಕೊಡುವ ನಿಟ್ಟಿನಲ್ಲಿ ಮಕ್ಕಳಿಂದಲೇ ವ್ಯಾಪಾರ ಮಾಡಿಸುವುದರ ಮೂಲಕ ವ್ಯವಹಾರದ ಪ್ರಜ್ಞೆ ಬೆಳೆಸಲಾಗುತ್ತದೆ. ಒಂದು ವಸ್ತುವನ್ನು ಅಂಗಡಿಯಲ್ಲಿ ಕೊಂಡುಕೊಳ್ಳುವಾಗ ವಸ್ತುವಿನ ಬೆಲೆ ಹಾಗೂ ಕೊಡಬೇಕಾಗಿರುವ ಹಣ, ಚಿಲ್ಲರೆ ಪಡೆಯುವುದು ಎಲ್ಲದರ ಬಗ್ಗೆ ಮಕ್ಕಳಲ್ಲಿ ಪ್ರಜ್ಞೆ ಹುಟ್ಟಿಸುವ ನಿಟ್ಟಿನಲ್ಲಿ ಮಕ್ಕಳ ಸಂತೆಯನ್ನು ಏರ್ಪಡಿಸಲಾಗಿದೆ ಎಂದು ಹೊಯ್ಸಳ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶೋಭಾ ನಾಗರಾಜ್ ತಿಳಿಸಿದರು.
TAGGED:
ಹಾಸನ ಮಕ್ಕಳ ಸಂತೆ ಕಾರ್ಯಕ್ರಮ