ಅರಕಲಗೂಡು (ಹಾಸನ):ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಸುಮಾರು 60 ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾದ ಘಟನೆ ತಾಲೂಕಿನ ಹಂಡ್ರಂಗಿ ಗ್ರಾಮದಲ್ಲಿ ನಡೆದಿದೆ.
ಅರಕಲಗೂಡು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ 60 ಮನೆಗಳ ಗೃಹೋಪಯೋಗಿ ವಸ್ತುಗಳಿಗೆ ಹಾನಿ! - ಶಾರ್ಟ್ ಸರ್ಕ್ಯೂಟ್
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಅರಕಲಗೂಡಿನ ಗ್ರಮವೊಂದರಲ್ಲಿ ಸುಮಾರು 60 ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾಗಿವೆ.
![ಅರಕಲಗೂಡು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ 60 ಮನೆಗಳ ಗೃಹೋಪಯೋಗಿ ವಸ್ತುಗಳಿಗೆ ಹಾನಿ! ಶಾರ್ಟ್ ಸರ್ಕ್ಯೂಟ್](https://etvbharatimages.akamaized.net/etvbharat/prod-images/768-512-7298846-thumbnail-3x2-uibhub.jpeg)
ಗ್ರಾಮದ ಹೈಸ್ಕೂಲ್ ಬೀದಿಯಲ್ಲಿರುವ ಮನೆಗಳಲ್ಲಿನ ಟಿವಿ, ಫ್ಯಾನ್, ಮಿಕ್ಸಿಗಳು ಹಾಗೂ 22 ಟಿವಿ, 20 ಸೆಟ್ ಟಾಪ್ ಬಾಕ್ಸ್, 4 ಮಿಕ್ಸಿ, ಫ್ರಿಡ್ಜ್ ಮತ್ತು ಬಲ್ಬುಗಳು ಸುಟ್ಟು ಹೋಗಿವೆ. ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿರುವ ಲೈನ್ನ ನ್ಯೂಟ್ರಲ್ನಲ್ಲಿಯೂ ವಿದ್ಯುತ್ ಪ್ರವಹಿಸುತ್ತಿರುವ ವಿಷಯವನ್ನು ಸೆಸ್ಕ್ ಸಿಬ್ಬಂದಿ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರಿರುವುದೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವಿದ್ಯುತ್ ಅವಘಡಕ್ಕೆ ವಾಸ್ತವ ಕಾರಣವೇನು ಎಂಬುದನ್ನು ಪರಿಶೀಲಿಸಿಲು ವಿದ್ಯುತ್ ಪರಿವೀಕ್ಷಕರಿಗೆ ತಿಳಿಸಿದ್ದು, ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಿನ್ನಸ್ವಾಮಿ ತಿಳಿಸಿದರು.