ಹಾಸನ: ಹಾಸನದಲ್ಲಿ ಮಳೆ ಮುಂದುವರಿದಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ಬಾಗೂರು ಮತ್ತು ನುಗ್ಗೆಹಳ್ಳಿ ನಡುವೆ ಇರುವ ತಗಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂವನಹಳ್ಳಿ (ವಡ್ಡರಹಟ್ಟಿ) ಗ್ರಾಮದಲ್ಲಿ ಗೋಡೆ ಕುಸಿದು ಬಾಲಕನೋರ್ವ ಮೃತಪಟ್ಟಿದ್ದಾನೆ.
ವಿಜಯಕುಮಾರ್ ಮತ್ತು ಚೈತ್ರ ದಂಪತಿಯ ಪುತ್ರ, 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಜ್ವಲ್ (13) ಮೃತ ವಿದ್ಯಾರ್ಥಿ. ರಾತ್ರಿ ಸುರಿದ ಮಳೆಗೆ ಮನೆಯ ಬಲಭಾಗದ ಗೋಡೆ ಬಾಲಕನ ಮೇಲೆ ಬಿದ್ದು ಅನಾಹುತ ಘಟಿಸಿದೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.